LATEST NEWS
ಕುಡುಕನ ಕೈಗೆ ಸಿಕ್ತು ಕಂತೆ ಕಂತೆ ಹಣ…ಇನ್ನೊಂದ್ ಪೆಗ್ ಗೆ ಕೈಯಲ್ಲಿದ್ದ ಹಣ ಪೊಲೀಸ್ ಖಜಾನೆಗೆ
ಮಂಗಳೂರು ಡಿಸೆಂಬರ್ 06:ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತೆ ಮಂಗಳೂರಿನಲ್ಲಿ ಒಂದು ಘಟನೆ ನಡೆದಿದೆ. ಕುಡುಕನೊಬ್ಬನಿಗೆ ದಾರಿಯಲ್ಲಿ ಕಂತೆ ಕಂತೆ ಹಣ ಸಿಕ್ಕರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅರ್ಧ ಗಂಟೆಯಲ್ಲೇ ಅಷ್ಟೂ ಹಣ ಪೊಲೀಸರ ಖಜಾನೆಯಲ್ಲಿ ಹಣ ಭದ್ರವಾಗಿದೆ.
ಕನ್ಯಾಕುಮಾರಿ ಮೂಲದ ಶಿವರಾಜ್ (49) ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಕುಡುಕನಾಗಿರುವ ಈತ ಮನೆಗೆ ಹೊಗದೆ ಹೋಟೆಲ್‌ನಲ್ಲಿ ಉಟ ಮಾಡಿ ಬಸ್ ಗಳಲ್ಲೇ ನಿದ್ದೆ ಮಾಡುತ್ತಿದ್ದಾನೆ. ಇದೇ ರೀತಿ ನವೆಂಬರ್ 27ರಂದು ಪಂಪ್‌ವೆಲ್ ಮೇಲ್ಲೇತುವೆ ಸಮೀಪದ ವೈನ್‌ಶಾಪ್ ಗೆ ಹೋಗಿ ಎಣ್ಣೆ ಹಾಕಿ ಪಕ್ಕದಲ್ಲಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ ಬೈಕ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಒಂದು ಚೀಲ ಬಿದ್ದಿತ್ತು. ಅಲ್ಲೆ ಇನ್ನೊಬ್ಬ ಕೂಲಿ ಕಾರ್ಮಿಕ ಅದೇ ಚೀಲವನ್ನು ನೋಡುತ್ತಿದ್ದ, ಬಳಿಕ ಇಬ್ಬರು ಚೀಲ ತೆಗೆದು ನೋಡಿದಾಗ ಅದರಲ್ಲಿ ಹಣದ ಕಂತೆ ಕಂತೆ ನೋಟು ಕಾಣಿಸಿದೆ. ಬಳಿಕ ಇಬ್ಬರೂ ಚೀಲ ಎತ್ತಿಕೊಂಡು ಎರಡು ನೋಟು ಹೊರಗೆ ತೆಗೆದು, ಮತ್ತೆ ಅದೇ ವೈನ್ ಶಾಪ್ ಗೆ ಹೋಗಿ ಇಬ್ಬರೂ ಕುಡಿದಿದ್ದಾರೆ. ಬಳಿಕ ಶಿವರಾಜ್ ಅದರಲ್ಲಿ ಅದರಲ್ಲಿದ್ದ ಎರಡು ನೋಟುಗಳ ಎರಡು ಕಂತೆಯನ್ನು ಆತನಿಗೆ ನೀಡಿದ್ದಾನೆ. ಬಳಿಕ ಮತ್ತೆ ಅದೇ ವೈನ್ ಶಾಪ್ ಗೆ ಬಂದ ಕುಡಿದಿದ್ದಾನೆ.
ಆದರೆ ಅಷ್ಟರಲ್ಲೇ ಯಾರೋ ಕೊಟ್ಟ ಮಾಹಿತಿಯಂತೆ ಗಸ್ತುನಿರತ ಪೊಲೀಸರು ಆತನನ್ನು ಕರೆದು ಕೊಂಡು ಹೋದರು. ಕುಡಿದ ನಶೆ ಇಳಿ ಯುವಾಗ ರಾತ್ರಿಯಾಗಿತ್ತು. ಪೊಲೀಸರು ದುಡ್ಡಿನ ಬಗ್ಗೆ ಕೇಳಿದಾಗ, ನನಗೆ ದಾರಿಯಲ್ಲಿ ಸಿಕ್ಕಿದ್ದು ಎಂದು ಉತ್ತರಿಸಿದ್ದು, ಒಂದು ಬಂಡಲ್ ಒಬ್ಬಾತನಿಗೆ ಕೊಟ್ಟಿರುವ ವಿಷಯ ತಿಳಿಸಿದರು. ಪೊಲೀಸರು ಮರುದಿನ ಶಿವರಾಜ್ ನೊಂದಿಗೆ ಬಂದು ಆ ಕೂಲಿ ಕಾರ್ಮಿನನ್ನು ಹುಡುಕಾಡಿದರೂ ಸಿಗಲಿಲ್ಲ. ಆ ಹಣ ಈಗ ಕಂಕನಾಡಿ ನಗರ ಪೊಲೀಸ್ ಠಾಣೆ ಯಲ್ಲಿದೆ. ಈ ಬಗ್ಗೆ ಕೇಸ್ ದಾಖಲಾಗಿಲ್ಲ. ಶಿವರಾಜ್ ಬಾಕ್ಸ್ನಲ್ಲಿ 5ರಿಂದ 10 ಲಕ್ಷ ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಾಕ್ಸ್ನಲ್ಲಿ 49 ಸಾವಿರ ರೂ ಮಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.