Connect with us

LATEST NEWS

ಮೊಹಮ್ಮದ್ ನಲಪಾಡ್ ಪರ ಸೋಶಿಯಲ್ ಮಿಡಿಯಾ ಅಭಿಯಾನ

ಮೊಹಮ್ಮದ್ ನಲಪಾಡ್ ಪರ ಸೋಶಿಯಲ್ ಮಿಡಿಯಾ ಅಭಿಯಾನ

ಬೆಂಗಳೂರು ಫೆಬ್ರವರಿ 23: ಬೆಂಗಳೂರಿನ ಯು.ಬಿ ಸಿಟಿಯಲ್ಲಿ ಗೂಂಡಾ ವರ್ತನೆ ತೋರಿ ವಿದ್ವತ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೊಹಮ್ಮದ್ ನಲಪಾಡ್‌ ಜೈಲು ಸೇರಿದ್ದಾನೆ. ದಿನ ಒಂದರಂತೆ ಶಾಂತಿನಗರ ಶಾಸಕ ಎನ್.ಎ ಹ್ಯಾರೀಸ್ ಅವರ ಪುತ್ರ ಮಹಮ್ಮದ್ ನಲಪಾಡ ಕುಕೃತ್ಯಗಳು ಒಂದೊಂದೆ ಬೆಳಕಿಗೆ ಬರುತ್ತಿವೆ.

ಅಹಂಕಾರ ತಲೆ ಏರಿದಾಗ ಮುನುಷ್ಯನ ವರ್ತನೆಯ ಮೇಲೆ ನಿಯಂತ್ರಣ ಇರುವುದಿಲ್ಲ ಎನ್ನುವುದಕ್ಕೆ ಮೊಹಮ್ಮದ್ ನಲಪಾಡ ಸ್ಪಷ್ಟ ಉದಾಹರಣೆ. ಆತನ ಗೂಂಡಾ ಪಡೆ ಎಲ್ಲಿಯ ವರೆಗೆ ಪವರ್ ಪುಲ್ ಎಂದರೆ ವಿದ್ವತ್ ಪರ ವಕೀಲರಿಗೂ ಜೀವ ಬೆದರಿಕೆ ಒಡ್ಡಿದೆ. ಇದರಿಂದಲೇ ಅಂದಾಜಿಸಬಹುದು ಮೊಹಮ್ಮದ್ ನಲಪಾಡ್ ನ ವ್ಯಕ್ತಿತ್ವ ಎಂತಹುದು ಎಂದು .

ಆದರೆ ಬೆಂಗಳೂರಿನ ಕೆಲ ನಾರಿಮಣಿಗಳು ನಲಪಾಡ್ ಪರ ಅಭಿಯಾನ ಆರಂಭಿಸಲು ತೀರ್ಮಾನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅಭಿಯಾನಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಮಾಧ್ಯಮಗಳಿಗೆ ಮೊಹಮ್ಮದ್ ನಲಪಾಡ್ ನ ಒಳ್ಳೆತನ ಕಾಣಿಸುತ್ತಿಲ್ಲ, ಹೀಗಾಗಿ ನಲಪಾಡ್ ಪರ ನಿಲ್ಲಲು ನಾರಿಮಣಿಯರು ಕರೆ ನೀಡಿದ್ದಾರೆ. ಮೊಹಮ್ಮದ್ ನಲಪಾಡ್ ಅವರ ತುಂಬಾ ಕ್ಲೋಸ್ ಆದ ನಾರಿಮಣಿಯರು, ಮೊಹಮ್ಮದ್ ನಿಂದ ಫೆವರ್ ಪಡೆದವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾಲ ಎಷ್ಟು ಬದಲಾಯಿತೆಂದರೆ ಕೆಲ ಮಾಧ್ಯಮ ಪ್ರತಿನಿಧಿಗಳು ಈ ಆಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಎಲ್ಲೋ ಕೇರಳದಿಂದ ಒಂದು ಕನ್ನಡಿಗರ ನಾಡಲ್ಲಿ ನೆಲೆಸಿ ಅಲ್ಲೆ ತಮ್ಮ ಪ್ರಭಾವ ಬಳಸಿ ಕೇರಳಿಗನೊಬ್ಬ ಶಾಸಕನಾಗಿ ಆಯ್ಕೆಯಾಗುತ್ತಾನೆ. ಆತನ ಮಗ ಕನ್ನಡಿಗನ ಮೇಲೆ ಗೂಂಡಾಗಿರಿ ನಡೆಸುತ್ತಾನೆ.

ಇಂತಹ ಗೂಂಡಾಗಿರಿ ತೋರಿದವರಿಗೂ ಅಭಿಮಾನಿಗಳಿದ್ದಾರೆ ಎಂದಾದರೇ ಕಾಲ ಎಷ್ಟು ಬದಲಾಗಿದೆ. ಮುಂಬರುವ ದಿನಗಳಲ್ಲಿ ಸೋ ಕಾಲ್ಡ್ ಬುದ್ದಿ ಜೀವಿಗಳು ಪ್ರಗತಿಪರರು ಚಿತ್ರನಟರು ನಲಪಾಡ ಪರ ಬೀದಿಗಳಿದು ಮಹಮ್ಮದ್ ನಲಪಾಡ ಅವರನ್ನು ಬಿಡುಗಡೆಗೊಳಿಸುವಂತೆ ಕ್ಯಾಂಡಲ್ ಮಾರ್ಚ್ ನಡೆಸಬಹುದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *