Connect with us

LATEST NEWS

ಪ್ರಧಾನಮಂತ್ರಿ ನರೇಂದ್ರ ಮೋದಿ ವಯಕ್ತಿಕ ವೆಬ್ ಸೈಟ್ ನ ಟ್ಟಿಟ್ಟರ್ ಖಾತೆ ಹ್ಯಾಕ್

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವೈಯುಕ್ತಿಕ ವೆಬ್ ಸೈಟ್ ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆಯನ್ನು ಬುಧವಾರ ರಾತ್ರಿ ಹ್ಯಾಕ್ ಮಾಡಲಾಗಿದೆ ಎಂದು ಟ್ವೀಟರ್ ಸ್ಪಷ್ಟಪಡಿಸಿದೆ.
ಈ ಟ್ವಿಟರ್ ಖಾತೆ ಮೂಲಕ ಪರಿಹಾರ ನಿಧಿಗೆ ಕ್ರಿಪ್ಟೊಕರೆನ್ಸಿಗಳ ಮೂಲಕ ಸಹಾಯ ಮಾಡುವಂತೆ ಸರಣಿ ಟ್ವೀಟ್‌ಗಳನ್ನು ಪ್ರಧಾನಿ ಮೋದಿ ವೆಬ್‌ಸೈಟ್‌ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಬುಧವಾರ ರಾತ್ರಿ ಸುಮಾರು ಮೂರು ಗಂಟೆಗೆ ನರೇಂದ್ರ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿತ್ತು. ಈ ಖಾತೆಯನ್ನ ಜಾನ್ ವಿಕ್ ([email protected]) ಮೂಲಕ ಹ್ಯಾಕ್ ಮಾಡಲಾಗಿದೆ. ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ. ಮಗದೊಂದು ಟ್ವೀಟ್ ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ನ್ಯಾಶನಲ್ ರಿಲೀಫ್ ಫಂಡ್‍ಗೆ ಹಣ ಹಾಕುವಂತೆ ಹೇಳಲಾಗಿದೆ. ಆದ್ರೆ ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಲಾಗಿದೆ. ಹ್ಯಾಕ್ ಬಳಿಕ ಅರ್ಧಗಂಟೆಯಲ್ಲಿ ಸಮಸ್ಯೆ ಪರಿಹರಿಸಲಾಗಿದೆ.


ಪ್ರಧಾನಿ ನರೇಂದ್ರ ಮೋದಿಯರ ವೈಯಕ್ತಿಕ ವೆಬ್ ಸೈಟ್ ಗೆ ಲಿಂಕ್ ಆಗಿರುವ ಈ ಟ್ವಿಟ್ಟರ್ ಖಾತೆ ಸುಮಾರು 2.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ. ಪ್ರಧಾನಿ ಮೋದಿ ಅವರ ವೈಯಕ್ತಿಕ ಟ್ವಿಟರ್‌ ಖಾತೆಯ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಆ ಖಾತೆಯನ್ನು 6.1 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ.  ಬರಾಕ್ ಒಬಮಾ, ಎಲೆನ್ ಮಸ್ಕ್ ಅವರ ಖಾತೆಗಳ ರೀತಿಯಲ್ಲಿ ಮೋದಿಯವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

Advertisement Advertisement
Click to comment

You must be logged in to post a comment Login

Leave a Reply