BELTHANGADI
ಡಿಜಿಟಲ್ ಇಂಡಿಯಾ ಟೀಕೆಗಳಿಗೆ ಧರ್ಮಸ್ಥಳದ ಗ್ರಾಮೀಣ ಪ್ರದೇಶದ ಮಹಿಳೆಯರೇ ಉತ್ತರ – ಮೋದಿ
ಡಿಜಿಟಲ್ ಇಂಡಿಯಾ ಟೀಕೆಗಳಿಗೆ ಧರ್ಮಸ್ಥಳದ ಗ್ರಾಮೀಣ ಪ್ರದೇಶದ ಮಹಿಳೆಯರೇ ಉತ್ತರ – ಮೋದಿ
ಬೆಳ್ತಂಗಡಿ ಅಕ್ಟೋಬರ್ 29: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಉಜಿರೆಯಲ್ಲಿ ನಡೆದ ರತ್ನಾಕರ ವರ್ಮ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಫಲಾನುಭವಿಗೆ ರೂಪೇ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ವೇದಿಕೆಗೆ ಆಗಮಿಸುತ್ತಿದ್ದಂತೆ ಕನ್ನಡದಲ್ಲೆ ಭಾಷಣ ಆರಂಭಿಸಿದರು ಪ್ರಧಾನಮಂತ್ರಿ ನರೇಂದ್ರ ಮೋದಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಕೇದಾರನಾಥಕ್ಕೆ ಕೆಲವು ದಿನಗಳ ಹಿಂದೆ ಭೇಟಿ ನೀಡಿದ್ದರೆ ಈ ಬಾರಿ ದಕ್ಷಿಣದ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಸೌಭಾಗ್ಯ ನನಗೆ ದೊರೆತಿದ್ದು ಖುಷಿ ತಂದಿದೆ ಎಂದು ಹೇಳಿ .
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಕೆಲಸವನ್ನು ಶ್ಲಾಘಿಸಿದ ನರೇಂದ್ರ ಮೋದಿ ಕಳೆದ 50 ವರ್ಷಗಳಿಂದ ಡಾ.ವೀರೇಂದ್ರ ಹೆಗ್ಗಡೆಯವರು ಮಾಡಿಕೊಂಡು ಬಂದಂತಹ ಕಾರ್ಯ ಅವಿಸ್ಮರಣೀಯ ಹೆಗಡೆಯವರಂಥ ವ್ಯಕ್ತಿತ್ವದ ಮುಂದೆ ನಾನು ತುಂಬಾ ತುಂಬಾ ಸಾಮಾನ್ಯ ಎಂದು ಹೇಳಿದರು.
ಕಾಲೇಜುಗಳಿಗೆ ಶ್ರೇಣಿಗಳನ್ನು ನಾವೀಗಾಗಲೇ ನೋಡುತ್ತಿದ್ದೇವೆ. ಸಾಮಾಜಿಕ ಕಲ್ಯಾಣಕ್ಕಾಗಿ ಒಂದು ಸಂಸ್ಥೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎನ್ನುವುದನ್ನು ಧರ್ಮಸ್ಥಳ ಮಾಡಿ ತೋರಿಸುತ್ತಾ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಡೀ ಭಾರತವನ್ನು ಕ್ಯಾಶ್ ಲೆಸ್ ಮಾಡುವತ್ತೆ ದಾಪುಗಾಲಿಟ್ಟಿದ್ದೆವೆ ಎಂದು ಹೇಳಿದ ಅವರು ಡಿಜಿಟಲ್ ಇಂಡಿಯಾ ಘೋಷಣೆಯಾದಾಗ ಕ್ಯಾಶ್ ಲೆಸ್ ವ್ಯವಸ್ಥೆ ಬಗ್ಗ ಅಪಸ್ವರ ಎತ್ತಿದ್ದರು, ಮಹಾನ್ ಚಿಂತಕರ ಟೀಕೆಗಳನ್ನು ಎದುರಿಸಬೇಕಾಗಿತ್ತು ಎಂದು ಹೇಳಿದ ಅವರು ಅವರ ಎಲ್ಲಾ ಟೀಕೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರೇ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದರು .
ಪರಿಸರ ರಕ್ಷಣೆ ಹಾಗೂ ನೀರಿನ ಸದ್ಬಳಕೆ ಬಗ್ಗೆ ಸಂಕಲ್ಪ ಮಾಡಬೇಕಾದ ಅನಿವಾರ್ಯತೆ ಇದೆ. ಪರ್ ಡ್ರಾಪ್ ಮೋರ್ ಕ್ರಾಪ್ “ಪರಿಕಲ್ಪನೆಯಡಿ ರೈತರು ಪ್ರತಿ ನೀರಿನ ಹನಿಯ ಬಳಕೆಯಲ್ಲೂ ದೃಷ್ಟಿಯಲ್ಲಿಟ್ಟು ಕೃಷಿ ಮಾಡುವತ್ತ ದಾಪುಗಾಲಿಡಬೇಕು ಎಂದು ಅವರು ಕರೆನೀಡಿದರು.