Connect with us

DAKSHINA KANNADA

Modi @74 , ಕಡಬದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು..!!

ದಕ್ಷಿಣ ಕನ್ನಡದಲ್ಲೂ ಮೋದಿ ಹುಟ್ಟು ಹಬ್ಬ ಪ್ರಯುಕ್ತ ವಿವಿಧ ಕಾರ್ಯಕ್ರಮಗಣ್ನು ಬಿಜೆಪಿ ಆಯೋಜಿಸಿದೆ. ಕಡಬದಲ್ಲಿ  ಬಿಜೆಪಿ ಮುಖಂಡರು,ಕಾರ್ಯಕರ್ತರು  ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ  ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಧಾನಿಯವರ ಆಯು ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಕಡಬ:  ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 74 ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ  ಬಿಜೆಪಿ  ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ದೇಶಾದ್ಯಾದ್ಯಂತ ಅಲ್ಲಲ್ಲಿ ಮೋದಿ ಆಯು ಆರೋಗ್ಯಕ್ಕಾಗಿ ವಿಸೇಷ ಪೂಜೆ ಮನಸ್ಕಾರಗಳು ನಡೆಯುತ್ತಿವೆ. ದಕ್ಷಿಣ ಕನ್ನಡದಲ್ಲೂ ಮೋದಿ ಹುಟ್ಟು ಹಬ್ಬ ಪ್ರಯುಕ್ತ ವಿವಿಧ ಕಾರ್ಯಕ್ರಮಗಣ್ನು ಬಿಜೆಪಿ ಆಯೋಜಿಸಿದೆ. ಕಡಬದಲ್ಲಿ  ಬಿಜೆಪಿ ಮುಖಂಡರು,ಕಾರ್ಯಕರ್ತರು  ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ  ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಧಾನಿಯವರ ಆಯು ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಇನ್ನು ದೇಶ ವಿದೇಷದ ಗಣ್ಯರು, ದೇಶದ ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟದ ನಾಯಕರು ಪ್ರಧಾನಿ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಅಲ್ಲದೆ, ಭಾರತಕ್ಕೆ ಮೋದಿಯವರು ಅದ್ಭುತ ನಾಯಕ ಎಂದು ಹೊಗಳಿದ್ದಾರೆ. ಕಾಂಗ್ರೆಸ್‌ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಪ್ರಧಾನಿ ಮೋದಿಯವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ʼಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರಿಗೆ ದೇವರು ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆʼ ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ.ನಡ್ಡಾ ಟ್ವೀಟ್‌ ಮಾಡಿ, ಪ್ರಧಾನಿ ಮೋದಿಯವ ನಾಯಕತ್ವ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದೆ. ಯಶಸ್ವಿ ಪ್ರಧಾನಿಯಾದ ನರೇಂದ್ರ ಮೋದಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ. ಇನ್ನುಳಿದಂತೆ ಕರ್ನಾಟಕದ ಬಿಜೆಪಿ ನಾಯಕರು, ತ್ರಿಪುರ-ಮಹಾರಾಷ್ಟ್ರ, ಗೋವಾ ಮತ್ತು ಎಲ್ಲ ಬಿಜೆಪಿ ಮುಖ್ಯಮಂತ್ರಿಗಳೂ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ವಿಶ್‌ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸಹ ಬರ್ತ್‌ ಡೇ ವಿಶ್‌ ತಿಳಿಸಿದ್ದಾರೆ. ಟ್ವೀಟ್‌ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ʼದೇಶಕ್ಕೆ ಅಸಾಧಾರಣ ನಾಯಕತ್ವವನ್ನ ನೀಡಿ, ಇಲ್ಲಿನ ಘನತೆ ಮತ್ತು ಸಮೃದ್ಧತೆಯನ್ನ ಹೆಚ್ಚಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ನಾವೀನ್ಯ ಪ್ರಯತ್ನಗಳು ಭಾರತವನ್ನ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ದಾರಿಯಾಗಲಿʼ ಎಂದು ಹಾರೈಸಿದ್ದಾರೆ.ಪ್ರಧಾನಿ ಮೋದಿ ಬರ್ತ್‌ ಡೇ ನಿಮಿತ್ತ ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಜೆಪಿ ನಡ್ಡಾ ಮತ್ತಿತರ ಗಣ್ಯರು ವಿಶ್‌ ಮಾಡಿದ್ದಾರೆ. ಟ್ವೀಟ್‌ ಮಾಡಿದ ಅಮಿತ್‌ ಶಾ ʼಪ್ರಧಾನಿ ಮೋದಿಯವರು ತಮ್ಮ ದಣಿವರಿಯದ ಕೆಲಸ, ಪರಿಶ್ರಮ ಮತ್ತು ದೂರದೃಷ್ಟಿಯ ಮೂಲಕ ದೇಶದ ನಿವಾಸಿಗಳಲ್ಲಿ ಸಕಾರಾತ್ಮಕ ಬದಲಾವಣೆ ತಂದಿದ್ದಾರೆ. ಪ್ರಧಾನಿ ಮೋದಿಯವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿ ʼಭಾರತದ ಯಶಸ್ವಿ ಪ್ರಧಾನಮಂತ್ರಿ ಪ್ರಧಾನಿ ಮೋದಿಯವರಿಗೆ ಜನ್ಮ ದಿನದ ಶುಭಾಶಯಗಳು. ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ನಾಯಕತ್ವ ಎಂಥದ್ದು ಎಂಬುದನ್ನ ಬರೀ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ನೋಡಿದೆ. ಪ್ರಧಾನಿ ಮೋದಿಯವರು ಅಧ್ಯಯನಶೀಲವಾಗಿ, ಏಕಾಗ್ರತೆಯಿಂದ ಮತ್ತು ಒಂದು ತಪಸ್ಸಿನಂತೆ ದೇಶವನ್ನ ಆಳುತ್ತಿದ್ದಾರೆ ಎಂದು ಹೇಳಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *