LATEST NEWS
ಮೋಡರ್ನಾ ಕಂಪೆನಿಯ ಕೋವಿಡ್ ಲಸಿಕೆ ಶೇಕಡ 94.5 ಪರಿಣಾಮಕಾರಿ
ವಾಶಿಂಗ್ಟನ್ ನವೆಂಬರ್ 18: ಮಾರಣಾಂತಿಕ ಕಾಯಿಲೆ ಕೊರೊನಾಗೆ ಲಸಿಕೆ ಕಂಡು ಹಿಡಿಯಲು ವಿವಿಧ ಕಂಪೆನಿಗಳು ಕಾರ್ಯಪ್ರವೃತವಾಗಿರುವ ನಡುವೆ ಅಮೇರಿಕಾದ ಔಷಧ ತಯಾರಿಕಾ ಕಂಪೆನಿ ಮೋಡಾರ್ನಾ ಇಂಕ್ ತನ್ನ ಕೋನಿಡ್ 19 ಲಸಿಕೆ 94.5 ಶೇಕಡ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
ಅಮೆರಿಕದ ಫಾರ್ಮಾ ಕಂಪನಿ ಮೋಡರ್ನಾ ಇಂಕ್ ಕರೋನಾ ಲಸಿಕೆ ತಯಾರಿಸಿರುವುದಾಗಿ ಹೇಳಿ ಭರವಸೆಯನ್ನು ಹುಟ್ಟುಹಾಕಿದೆ. ಫೈಝರ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆ 90 ಶೇಕಡಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬ ಸುದ್ದಿ ಹೊರಬಿದ್ದ ಒಂದು ವಾರದ ಬಳಿಕ, ಈ ಎರಡನೇ ಭರವಸೆದಾಯಕ ಲಸಿಕೆಯನ್ನು ಘೋಷಿಸಲಾಗಿದೆ.
ಈ ಎರಡೂ ಲಸಿಕೆಗಳನ್ನು ಮೆಸೆಂಜರ್ ಆರ್‌ಎನ್‌ಎ ಎಂಬ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲು ಈ ತಂತ್ರಜ್ಞಾನ ಬಳಕೆಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಲಕ್ಷಣಗಳನ್ನು ತೋರಿಸುವ ಬಹುತೇಕ ಎಲ್ಲ ಕೊರೋನ ವೈರಸ್ ಪ್ರಕರಣಗಳನ್ನು ಮೋಡರ್ನಾದ ಲಸಿಕೆ ತಡೆದಿದೆ ಎನ್ನುವುದನ್ನು 30,000ಕ್ಕೂ ಅಧಿಕ ಜನರ ಮೇಲೆ ನಡೆಸಿದ ಪ್ರಯೋಗಗಳಿಂದ ತಿಳಿದುಬಂದಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಕಂಪೆನಿ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಮಾಡರ್ನಾ ಕಂಪನಿ, ಹ್ಯೂಮನ್ ಕ್ಲಿನಿಕಲ್ ಟ್ರಯಲ್ ನ ಮೊದಲ ಪರಿಣಾಮಗಳು ಪಾಸಿಟಿವ್ ಬಂದಿವೆ ಹಾಗೂ ಜುಲೈ ತಿಂಗಳಿನಲ್ಲಿ ಈ ವ್ಯಾಕ್ಸಿನ್ ನ ಮೂರನೇ ಹಂತದ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ.