LATEST NEWS
ಮೊಬೈಲ್ ಗಾಗಿ ಮಹಿಳೆಯನ್ನು ರಸ್ತೆ ಮೇಲೆ ಎಳೆದೊಯ್ದ ಕಳ್ಳರು…!!

ದೆಹಲಿ : ಬೈಕ್ ಗಳಲ್ಲಿ ಬಂದು ಮಹಿಳೆಯರ ಚಿನ್ನದ ಸರಗಳ್ಳತನ ಮಾಡುವ ಪ್ರಕರಣಗಳ ನಡುವೆ ಇದೀಗ ಮೊಬೈಲ್ ಕಳ್ಳತನದ ಪ್ರಕರಣಗಳು ದಾಖಲಾಗುತ್ತಿದ್ದು, ಮಹಿಳೆಯೊಬ್ಬರಿಂದ ಬೈಕ್ ನಲ್ಲಿ ಬಂದ ಕಳ್ಳರು ಮೊಬೈಲ್ ಎಳೆದೊಯ್ಯುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ಶಾಲಿಮರ್ ಬಾಗ್‍ನಲ್ಲಿ ಈ ಘಟನೆ ನಡೆದಿದ್ದು, ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಬೈಕ್ ಓಡಿಸುತ್ತಿದ್ದು, ಹಿಂದೆ ಕುಳಿತಿರುವ ಮತ್ತೊಬ್ಬ ವ್ಯಕ್ತಿ ಮಹಿಳೆಯೊಬ್ಬರಿಂದ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಮಾತ್ರ ಮೊಬೈಲ್ ಬಿಡದ ಕಾರಣ ಮಹಿಳೆಯನ್ನು ಹಿಡಿದು ಎಳೆದುಕೊಂಡು ಹೋಗುವುದನ್ನು ಕಾಣಬಹುದು. ನಂತರ ಒನ್ ವೇಯಲ್ಲಿ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ರಸ್ತೆಯ ಮಧ್ಯೆಯೇ ಬಿಸಾಡಿ ಹೋಗುತ್ತಾರೆ. ಆಗ ಬಿದ್ದಿರುವ ಮಹಿಳೆಯನ್ನು ಕಂಡ ಸಾರ್ವಜನಿಕರು ಆಕೆಯ ಸಹಾಯಕ್ಕೆ ಬಂದು ರಸ್ತೆ ಮಧ್ಯದಿಂದ ಬದಿಗೆ ಕರೆದುಕೊಂಡು ಹೋಗುವುದನ್ನು ನೋಡಬಹುದು.

ಸುಮಾರು 150 ಮೀಟರ್ ಎಳೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ, ಪೋರ್ಟಿಸ್ ಕೆಲಸ ಮಾಡುವ ಇವರನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.