LATEST NEWS
ರಾಜ್ಯ ಸರಕಾರದಿಂದ ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಹುನ್ನಾರ – ಐವನ್ ಡಿಸೋಜಾ ಆರೋಪ
ರಾಜ್ಯ ಸರಕಾರದಿಂದ ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಹುನ್ನಾರ – ಐವನ್ ಡಿಸೋಜಾ ಆರೋಪ
ಮಂಗಳೂರು ಅಕ್ಟೋಬರ್ 17: ರಾಜ್ಯ ಸರಕಾರ ಇತ್ತೀಚೆಗೆ ನೇಮಿಸಿದ್ದ ವಿವಿಧ ಅಕಾಡೆಮಿಗಳ ಅಧ್ಯಕ್ಷ ಸದಸ್ಯರ ಆಯ್ಕೆಯಲ್ಲಿ ಕ್ರೈಸ್ತ ಸಮುದಾಯದ ಕೊಂಕಣಿ ಭಾಷೆಗೆ ಒಂದೇ ಒಂದೂ ಸದಸ್ಯತ್ವ ಕೊಡದೆ, ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಹುನ್ನಾರ ನಡೆಸಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 16 ಅಕಾಡೆಮಿಗಳಿಗೆ ಮತ್ತು ಪ್ರಾಧಿಕಾರಗಳಿಗೆ ರಾಜ್ಯ ಸರ್ಕಾರ ಅಧ್ಯಕ್ಷ ಸದಸ್ಯರನ್ನು ಆಯ್ಕೆ ಮಾಡಿದ್ದು, ಆದರೆ ರಾಜ್ಯಕ್ಕಾಗಿ ಶಿಕ್ಷಣ, ಆರೋಗ್ಯಯೇತರ ವಿಷಯಗಳಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಕ್ರೈಸ್ತ ಸಮುದಾಯದ ಕೊಂಕಣಿ ಭಾಷೆಗೆ ಒಂದೇ ಒಂದೂ ಸದಸ್ಯತ್ವ ಕೊಡದೆ ಸರ್ಕಾರ ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಹುನ್ನಾರ ನಡೆಸಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು 15 ದಿನದೊಳಗೆ ಈ ಅನ್ಯಾಯವನ್ನು ಸರಿಪಡಿಸಿ ಸರಿಯಾದ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೊಂಕಣಿ ಸಮುದಾಯದೊಂದಿಗೆ ವಿಧಾನ ಸೌಧ ಮುಂಭಾಗ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.