Connect with us

    LATEST NEWS

    ರಾಜ್ಯಪಾಲರನ್ನು ಹಿಂದಕ್ಕೆ ಕಳಿಸದಿದ್ದರೆ ಬಾಂಗ್ಲಾದೇಶದ ಪ್ರಧಾನಿ ಸ್ಥಿತಿ ಬರಲಿದೆ – ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ

    ಮಂಗಳೂರು ಅಗಸ್ಟ್ 19: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ರಾಷ್ಟ್ರಪತಿಗಳು ಹಿಂದಕ್ಕೆ ಕಳಿಸದಿದ್ದರೆ ಬಾಂಗ್ಲಾದೇಶದ ಅಧ್ಯಕ್ಷರಿಗೆ ಆದ ಸ್ಥಿತಿ ಅವರಿಗೆ ಬರುತ್ತದೆ ಎಂದು ವಿಧಾನ ಪರಿಷತ್ ಐವಾನ್ ಡಿಸೋಜ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿಗೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು, ಈ ವೇಳೆ ಮಾತನಾಡಿದ ಎಂಎಲ್ಸಿ ಐವನ್ ಡಿಸೋಜಾ ರಾಜ್ಯಪಾಲರೇ ನಿಮ್ಮಂಥ ಕಳ್ಳ, ಕುತಂತ್ರಿ, ಜನವಿರೋಧಿ ಮತ್ತೊಬ್ಬ ಈ ದೇಶದಲ್ಲಿ ಇಲ್ಲ. ನಿಮ್ಮನ್ನು ನಾವು ಓಡಿಸುತ್ತೇವೆ. ರಾಜ್ಯಪಾಲರ ಕಚೇರಿಗೆ ರಾತ್ರಿಯೇ ಮುತ್ತಿಗೆ ಹಾಕುತ್ತೇವೆ, ರಾಜ್ಯಪಾಲರ ಚಲೋ ಮಾಡ್ತೀವಿ. ಬಿಜೆಪಿ ಕೈಗೊಂಬೆ ರೀತಿ ಇರೋ ರಾಜ್ಯಪಾಲರೇ ಗೆಟ್ ಔಟ್, ಗೆಟ್ ಲಾಸ್ಟ್ ಎಂದು ಐವಾನ್ ಡಿಸೋಜ ಹೇಳಿಕೆ ನೀಡಿದ್ದಾರೆ. ಅಲ್ಲದೆ ಬಾಂಗ್ಲಾದೇಶದ ಪ್ರಧಾನಿ ಹೇಗೆ ದೇಶ ಬಿಟ್ಟರೋ ಅದೇ ಸ್ಥಿತಿ ನಿಮಗೆ ಆಗುತ್ತದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *