LATEST NEWS
ಪ್ಲಾಸ್ಟಿಕ್ ಬದಲು ಬಾಳೆ ಎಲೆ ಉಪಯೋಗಿಸಿ ಝೊಮೊಟೋ ಸ್ವಿಗ್ಗಿಗೆ ಶಾಸಕ ಕಾಮತ್ ಮನವಿ
ಪ್ಲಾಸ್ಟಿಕ್ ಬದಲು ಬಾಳೆ ಎಲೆ ಉಪಯೋಗಿಸಿ ಝೊಮೊಟೋ ಸ್ವಿಗ್ಗಿಗೆ ಶಾಸಕ ಕಾಮತ್ ಮನವಿ
ಮಂಗಳೂರು ಜೂನ್ 20: ಆಹಾರ ಪೊಟ್ಟಣ ಕಟ್ಟಲು ಬಾಳೆ ಎಲೆ ಬಳಸಲು ಖ್ಯಾತ ಆಹಾರ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ ಹಾಗೂ ಝೊಮೆಟೋ ಸಂಸ್ಥೆಗಳಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.
ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ನಗರದಲ್ಲಿರುವ ಪ್ಲಾಸ್ಟಿಕ್ ಹಾವಳಿಯನ್ನು ಕಡಿಮೆ ಮಾಡಲು ಆಹಾರ ಡೆಲಿವರಿ ಸಂಸ್ಥೆಗಳಾದ ಝೋಮೋಟೋ ಹಾಗೂ ಸ್ವಿಗ್ಗಿಗೆ ಈ ಬಗ್ಗೆ ಕಾರ್ಯಪ್ರವರ್ತರಾಗಲು ಲಿಖಿತ ಮನವಿ ಮಾಡಿದ್ದಾರೆ.
ಕರಾವಳಿಯ ಸಾಂಬಾರು ಪದಾರ್ಥಗಳನ್ನು ಬಿಟ್ಟು ಉಳಿದ ಆಹಾರವನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುವಂತಹ ಕಾರ್ಯಕ್ಕೆ ಮುಂದಾಗಬೇಕೆಂದು ಮಾಡಬೇಕೆಂದು ಮನವಿ ಮಾಡಿದ್ದಾರೆ.
ಕರಾವಳಿಯ ಖಾದ್ಯಗಳಾದ ಮೂಡೆ, ಕೊಟ್ಟಿಗೆ, ಗಟ್ಟಿ ಮುಂತಾದುವುಗಳನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ಕೊಟ್ಟರೆ ಆರೋಗ್ಯಕ್ಕೂ ಉತ್ತಮ ಎಂದು ಶಾಸಕರು ಮನವಿ ಮಾಡಿದ್ದಾರೆ.
ಶಾಸಕರ ಮನವಿಗೆ ಸ್ವಿಗ್ಗಿ ಸಂಸ್ಥೆ ಸಕರಾತ್ಮಕವಾಗಿ ಸ್ಪಂದಿಸಿದ್ದು ಈ ಬಗ್ಗೆ ಕಾರ್ಯಪ್ರವರ್ತರಾಗುತ್ತೇವೆ ಎಂದು ಭರವಸೆ ನೀಡಿದ್ದಾರೆ. ಪರಿಸರ ಸಂರಕ್ಷಣೆಗೆ ಶಾಸಕ ವೇದವ್ಯಾಸ್ ಕಾಮತ ಅವರ ಈ ದಿಟ್ಟ ಹೆಜ್ಜೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.