LATEST NEWS
ನಾನೇನೂ ತಪ್ಪು ಮಾಡಿಲ್ಲ..ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ – ಶಾಸಕ ಉಮಾನಾಥ ಕೋಟ್ಯಾನ್

ಮಂಗಳೂರು ಮಾರ್ಚ್ 25: ವಿಧಾನಸಭೆ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಅಧಿವೇಶನದಿಂದ ಅಮಾನಾತಾಗಿರುವ ಶಾಸಕ ಉಮಾನಾಥ ಕೋಟ್ಯಾನ್ ಸದನದಲ್ಲಿ ಪ್ರತಿಭಟನೆ ನಡೆದಾಗ ನಾನೇನೂ ತಪ್ಪು ಮಾಡಿಲ್ಲ. ವಿನಾಕಾರಣ ನನ್ನ ಹೆಸರನ್ನು ಸೇರಿಸಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನೆಯ ನಂತರ ಸ್ಪೀಕರ್ ಯು.ಟಿ. ಖಾದರ್ ಅವರು ನಮ್ಮಲ್ಲಿ ಮಾತುಕತೆ ನಡೆಸಿದ್ದು, ತಪ್ಪು ಒಪ್ಪಿಕೊಂಡರೆ ಆರು ತಿಂಗಳ ನಿಷೇಧವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ. ಆದರೆ, ನಾನು ತಪ್ಪೇ ಮಾಡದಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಬೇರೆಯವರು ತಪ್ಪು ಒಪ್ಪಿಕೊಳ್ಳಲಿ; ಬಿಡಲಿ ನನಗೆ ಸಂಬಂಧಿಸಿದ್ದಲ್ಲ. ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಅಂದಿನ ಸ್ಪೀಕರ್‌ಗೆ ಅವಮಾನ ಮಾಡಿದವರು ಇಂದು ದರ್ಪ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ಎಂದರು.
