LATEST NEWS
ಹಿಜಾಬ್- ಕೇಸರಿ ಶಾಲು ವಿವಾದ : ಉಡುಪಿಯಲ್ಲಿ ಶಾಂತಿ ಸಭೆ

ಉಡುಪಿ: ನಾಳೆಯಿಂದ ಪ್ರೌಢಶಾಲೆಗಳು ಪ್ರಾರಂಭವಾಗಲಿರುವ ಹಿನ್ನಲೆ ಹಿಜಬ್ ಕೇಸರಿ ವಿವಾದದ ಕೇಂದ್ರ ಬಿಂದು ಉಡುಪಿಯಲ್ಲಿ ಇಂದು ಶಾಂತಿ ಸಭೆ ನಡೆದಿದೆ. ಶಾಂತಿ ಸಭಊೆಯಲ್ಲಿ ಜಿಲ್ಲೆಯ ಎಲ್ಲಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದು, ವಿಧ್ಯಾರ್ಥಿನಿಯರ ಬೆಂಬಲಕ್ಕಿರುವ ಸಿಎಫ್ಐ ಸಂಘಟನೆ ಗೈರಾಗಿದೆ.
ನಂತರ ಮಾತನಾಡಿದ ರಘುಪತಿ ಭಟ್ ಕೋರ್ಟ್ ತೀರ್ಪಿನವರೆಗೆ ಅಹಿತಕರ ಘಟನೆ ಆಗದಂತೆ ಮನವಿ ಮಾಡಲಾಗಿದೆ. ಸಮವಸ್ತ್ರ ಇರುವ ಕಾಲೇಜುಗಳಲ್ಲಿ ಕೋರ್ಟ್ ಆದೇಶ ಅನ್ವಯ ಆಗಲಿದೆ. ಯಾರೂ ಹಿಜಾಬ್, ಕೇಸರಿ ಶಾಲು ಧರಿಸದಂತೆ ಹೇಳಿದ್ದೇವೆ. ಕೋರ್ಟ್ ಮಧ್ಯಂತರ ಆದೇಶ ಮೀರಲ್ಲ ಎಂದು ಹೇಳಿದ್ದಾರೆ ಎಂದು ಶಾಂತಿ ಸಭೆ ಬಳಿಕ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಎಲ್ಲರೂ ಶಾಂತಿಯನ್ನು ಬಯಸುವ ಜನರಿದ್ದಾರೆ. ಆಗಬಾರದ್ದು ಆಗಿಹೋಗಿದೆ, ಮುಂದೆ ಶಾಂತಿಯುತವಾಗಿರಲಿ. ಒಳ್ಳೆಯ ರೀತಿಯಲ್ಲಿ ಅಂತ್ಯವಾಗಲಿ ಎಂದು ಭಾವಿಸುತ್ತೇವೆ. ಉಡುಪಿ ಜಿಲ್ಲೆಯಲ್ಲಿ ಶಾಂತಿ ವಾತಾವರಣ ಹಾಳಾಗಬಾರದು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಸಮ್ಮತಿಸಿದ್ದಾರೆ. ಹಿಜಾಬ್ ರಹಿತವಾಗಿ ಶಾಲೆಗೆ ಕಳಿಸುವುದು ಪೋಷಕರಿಗೆ ಬಿಟ್ಟದ್ದು. ಎಲ್ಲಾ ಮಕ್ಕಳು ಶಾಲೆಗೆ ಬರಬೇಕೆನ್ನುವುದು ನಮ್ಮ ಆಶಯ. ಶಾಲಾ ಕಾಲೇಜು ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಸಹಕರಿಸಲಿ. ಮಕ್ಕಳು ಸಾಂವಿಧಾನಿಕ ಹಕ್ಕು ಕೇಳುತ್ತಿದ್ದಾರೆ. ಹೈಕೋರ್ಟ್ನಿಂದ ಒಳ್ಳೆಯ ತೀರ್ಪು ಬರುವ ವಿಶ್ವಾಸವಿದೆ ಎಂದು ಶಾಂತಿ ಸಭೆ ನಂತರ ಎಸ್ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಹೇಳಿಕೆ ನೀಡಿದ್ದಾರೆ.