DAKSHINA KANNADA
ಶಾಸಕ ಖಾದರ್ 3,500 ಕೋಟಿ ರೂ ಅಧಿಕೃತ, 10,000 ಕೋಟಿ ರೂಗಳ ಅನಧಿಕೃತ ಒಡೆಯ: ರಿಯಾಝ್ ಫರಂಗಿಪೇಟೆ
ಉಳ್ಳಾಲ, ಎಪ್ರಿಲ್ 17: ಉಳ್ಳಾಲ ಶಾಸಕ ಯು.ಟಿ ಖಾದರ್ 3,500 ರೂ. ಕೋಟಿ ಅಧಿಕೃತ ಒಡೆಯ ಹಾಗೂ 10,000 ಕೋಟಿಗಳ ಅನಧಿಕೃತ ಒಡೆಯನಾಗಿದ್ದಾರೆ ಎಂದು ಉಳ್ಳಾಲದ ಎಸ್ ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಗಂಭೀರವಾಗಿ ಆರೋಪಿಸಿದ್ದಾರೆ.
ಮಂಗಳೂರು ವಿಧಾಸನಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಿಯಾಝ್ ಫರಂಗಿಪೇಟೆ. ಸರಳ ವ್ಯಕ್ತಿತ್ವ, ಸ್ಟೀಲ್ ಲೋಟದಲ್ಲಿ ಚಹಾ ಕುಡಿಯುವವರು ಕೆ.ಟಿಯನ್ನು ಸೇವಿಸುವವರು ಉಳ್ಳಾಲದ ಶಾಸಕರು. ಚುನಾವಣೆ ಬಂದಾಗ ಎಲ್ಲರಿಂದಲೂ ಹಣ ಸಂಗ್ರಹಿಸಿ ಚುನಾವಣೆ ಎದುರಿಸುತ್ತಾರೆ. ಆದರೆ ಅವರ ಜತೆಗಿರುವ ಕಾಂಗ್ರೆಸ್ ಕಾರ್ಯಕರ್ತರು ಯುಎಇ ಯ ಬರ್ ದುಬಾಯಿಯಲ್ಲಿರುವ ಎನ್ ಬಿಡಿ ಎಮಿರೇಟ್ಸ್ ಬ್ಯಾಂಕಿನಲ್ಲಿ ಯು.ಟಿ ಅಬ್ದುಲ್ ಖಾದರ್ ಅಲೀಫ್ ಆಲಿ ಹೆಸರಿನಲ್ಲಿರುವ 3,500 ಕೋಟಿ ರೂ. ಮತ್ತು 10,000 ಕೋಟಿ ರೂ. ಯಾರದ್ದು ಅನ್ನುವುದನ್ನು ಪ್ರಶ್ನಿಸಬೇಕಿದೆ.
2013ರಿಂದ 2019 ರವರೆಗೆ ಇದೇ ಹೆಸರಿನಲ್ಲಿ ದುಡ್ಡು ಜಮಾವಣೆ ಆಗಿದೆ. 2019ರ ಇಡಿ ಮತ್ತು ಐಟಿ ದಾಳಿಗೆ ಹೆದರಿ ಅದೇ ಹಣ ಮತ್ತೆ ಯುಕೆ ಬ್ಯಾಂಕಿಗೆ ವರ್ಗಾಯಿಸಲಾಗಿದೆ. ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಶಾಸಕರ ಟೇಬಲಿಗೆ ಬರುವ ದಿನಗಳು ದೂರವಿಲ್ಲ.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಮಾತನಾಡಿ ಭಯಮುಕ್ತ, ಹಸಿವು ಮುಕ್ತ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಧಕ್ಕಿಸಿಕೊಡುವ ಉದ್ದೇಶ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಇರುವ ಏಕೈಕ ಪಕ್ಷ ಎಸ್ ಡಿಪಿಐ.
ಹಿಜಾಬ್ ಸಂದರ್ಭ ಸಹೋದರಿಯರ ಕಣ್ಣೀರು ಕಂಡಾಗ, ಕರಾವಳಿಯ ಏಕೈಕ ಮುಸ್ಲಿಂ ಶಾಸಕನ ಮಾತನ್ನು ಉಳ್ಳಾಲದ ಜನತೆ ಮರೆಯಬಾರದು. ಕಲಿಕೆ ಮೊಟಕುಗೊಳಿಸಿ ಕಣ್ಣೀರು ಹಾಕುತ್ತಿದ್ದ ವಿದ್ಯಾರ್ಥಿನಿಯರು ಪಾಕಿಸ್ತಾನ, ಸೌದಿ ಅರೆಬಿಯಾಕ್ಕೆ ಹೋಗಿ ಅಂದಿರುವುದನ್ನು ನೆನಪಿಸಬೇಕಿದೆ ಎಂದರು.