KARNATAKA
ಧರ್ಮನಿಂದಕ ಉದಯನಿಧಿ ವಿರುದ್ಧ ಕಾನೂನು ಕ್ರಮಕ್ಕೆ ಶಾಸಕ ಕಾಮತ್ ಆಗ್ರಹ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು (ಹಿಂದೂ ಧರ್ಮ) ಶಾಶ್ವವಾಗಿ ನಾಶ ಮಾಡಬೇಕು ಎಂದು ನೀಡಿರುವ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಮಂಗಳೂರು : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು (ಹಿಂದೂ ಧರ್ಮ) ಶಾಶ್ವವಾಗಿ ನಾಶ ಮಾಡಬೇಕು ಎಂದು ನೀಡಿರುವ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
“ಡೆಂಗ್ಯೂ ಮತ್ತು “ಮಲೇರಿಯಾ” ಕ್ಕೆ ಹೋಲಿಸಿದ್ದು ಅಲ್ಲದೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದಾಗಿ ನೀಡಿದ ಹೇಳಿಕೆ ಅತ್ಯಂತ ಖಂಡನೀಯ. ಈ ಹೇಳಿಕೆಯಿಂದ ಈ ದೇಶದಲ್ಲಿರುವ ಬಹುಸಂಖ್ಯಾತ ಸನಾತನ ಧರ್ಮಿಯರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ತಕ್ಷಣ ತಮಿಳುನಾಡು ಸರಕಾರ ಉದಯನಿಧಿ ಮೇಲೆ ಸ್ವಯಂಪ್ರೇರಿತ ಕೇಸು ದಾಖಲಿಸಿ ಅವರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಉದಯನಿಧಿ ಹೇಳಿಗೆ ಕೇವಲ ಡಿಎಂಕೆ ಪಕ್ಷದ ಮನಸ್ಥಿತಿ ಮಾತ್ರವಲ್ಲ, ಆ ಪಕ್ಷ ಒಳಗೊಂಡಿರುವ ಕಾಂಗ್ರೆಸ್ ಸಹಿತ ಇಂಡಿಯಾ ಒಕ್ಕೂಟದ ಇತರ ಪಕ್ಷಗಳ ಮನಸ್ಥಿತಿಯೂ ಇದೇ ಆಗಿದೆ. ಹಲವರು ಉದಯನಿಧಿ ಹೇಳಿಕೆಯನ್ನ ಸಮರ್ಥಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ಹಿಂದೂ ಧರ್ಮದ ಅವಹೇಳನ ಮಾಡುತ್ತಿರುವುದರ ಜತೆಯಲ್ಲಿ ಸನಾತನ ಧರ್ಮವನ್ನು ನಾಶಪಡಿಸಲು ಯತ್ನಿಸುತ್ತಿರುವುದು ಹಲವು ವರ್ಷಗಳಿಂದ ನಡೆಯುತ್ತಿದೆ. ಅವರನ್ನು ಬೆಂಬಲಿಸಿದರೆ ಸನಾತನ ಸಂಸ್ಕೃತಿಗೆ ದ್ರೋಹ ಮಾಡಿದಂತಾಗುತ್ತದೆ. ಹಾಗಾಗಿ ಸನಾತನ ಧರ್ಮದ ಅನುಯಾಯಿಗಳು ಇಂತಹಾ ಮನಸ್ಥಿತಿಯ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.