LATEST NEWS
ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ – ಬಿಎಸ್‌ವೈ ಸರ್ಕಾರಕ್ಕೆ ಶುಭ ಕೋರಿದ ಶಾಸಕ ಕಾಮತ್

ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ – ಬಿಎಸ್‌ವೈ ಸರ್ಕಾರಕ್ಕೆ ಶುಭ ಕೋರಿದ ಶಾಸಕ ಕಾಮತ್
ಮಂಗಳೂರು ಡಿಸೆಂಬರ್ 9:ಭಾರೀ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧರಿಸುವ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೇಫ್ ಆಗಿದೆ. ಮತದಾರರು ವಿಜಯದ ಮಾಲೆಯನ್ನು ಬಿಜೆಪಿ ಕೊರಳಿಗೆ ಹಾಕಿದ್ದಾರೆ. ಈ ಹಿನ್ನೆಲೆ ಮಂಗಳೂರು ಶಾಸಕ ಡಿ. ವೇದವ್ಯಾಸ್ ಕಾಮತ್ ಶುಭ ಕೋರಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಶುಭ ಕೋರಿದ ಅವರು, ನಮ್ಮ ಸಂಸದರೂ ಹಾಗೂ ರಾಜ್ಯಾದ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಪ್ರಬಲ ನಾಯಕತ್ವದಲ್ಲಿ ಉಪಚುನಾವಣೆ ಎದುರಿಸಿದ್ದ ಬಿಜೆಪಿ ನಿರೀಕ್ಷೆಯಂತೆ ಗೆದ್ದಿದ್ದು, ರಾಜ್ಯದಲ್ಲಿ ಮುಂದಿನ ಮೂರು ವರ್ಷ ಸ್ಥಿರ ಸರ್ಕಾರ ಇರಲಿದೆ. ಜನರಿಗೆ ಬಿಜೆಪಿ ಪಕ್ಷದ ಮೇಲಿನ ವಿಶ್ವಾಸಕ್ಕೆ ಈ ಗೆಲುವು ಸಾಕ್ಷಿಯಾಗಿದೆ. ಮಧ್ಯಂತರ ಚುನಾವಣೆಯೇ ಬೇಡ ಅನ್ನೋ ನಿರ್ಧಾರಕ್ಕೆ ಮತದಾರರು ಜೈ ಅಂದಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದ್ದು, ಉತ್ತಮ ಆಡಳಿತವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
