BELTHANGADI
ಚುನಾವಣಾ ಸಂದರ್ಭ ಹಿಂದೂ ಮುಖಂಡರ ಕಾಂಗ್ರೇಸ್ ಪರ ಪ್ರಚಾರ: ಹಿಂದೂ ಮುಖಂಡರನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ, ಮೇ 22: ಬೆಳ್ತಂಗಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಚುನಾವಣಾ ಸಂದರ್ಭ ಹಿಂದೂ ಮುಖಂಡರು ಕಾಂಗ್ರೇಸ್ ಪರ ಪ್ರಚಾರ ಮಾಡಿದ ವಿಚಾರವಾಗಿ ಹಿಂದೂ ಮುಖಂಡರನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕೇಸರಿ ಶಾಲು ಹಾಕಿ ಬಂದ ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ, ಮಹೇಶ್ ಶೆಟ್ಟಿ ತಿಮರೋಡಿ ಹೆಸರು ಉಲ್ಲೇಖಿಸಿ ಮಾತನಾಡಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಸತ್ಯಜಿತ್ ಸುರತ್ಕಲ್ ಬೆಳ್ತಂಗಡಿಯಲ್ಲಿ ಜಾತಿ ರಾಜಕಾರಣದಲ್ಲಿ ತೊಡಗಿಕೊಂಡರು, 24 ಹಿಂದೂ ಕಾರ್ಯಕರ್ತರ ಕೊಲೆಗೆ ಕಾರಣವಾದ ಸಿದ್ಧರಾಮಯ್ಯರಿಗೆ ಮತ ಹಾಕುವಂತೆ ಕೇಸರಿ ಶಾಲು ಹಾಕಿ ಕೇಳಿದರು.

ಭಜರಂಗದಳವನ್ನು ನಿಶೇಧ ಮಾಡುವ ಕಾಂಗ್ರೆಸ್ ಪರ ಮತಯಾಚಿಸಿದರು, ಇದು ನಿಮ್ಮ ಯಾವ ಸೀಮೆಯ ಹಿಂದುತ್ವ, ಇನ್ನೊಬ್ಬ ಮುಖಂಡ ಮಹೇಶ್ ಶೆಟ್ಡಿ ತಿಮರೋಡಿ ದಿನಕ್ಕೆ 200 ಮಂದಿಗೆ ಫೋನ್ ಮಾಡಿ ಕಾಂಗ್ರೆಸ್ ಗೆ ಮತ ಹಾಕುವಂತೆ ಒತ್ತಾಯಿಸಿದಿರಿ. ಮಂಗಳೂರಿನಿಂದ ಬಂದ ಪ್ರವೀಣ್ ವಾಲ್ಕೆ ಕೂಡಾ ನನ್ನ ವಿರುದ್ಧ ಪ್ರಚಾರ ಮಾಡಿದರು, ಹಿಂದುತ್ವ ಹಾಗು ಸಿದ್ಧಾಂತಕ್ಕೆ ಚ್ಯುತಿ ತರದ ನನ್ನ ವಿರುದ್ಧ ಪ್ರಚಾರ ಮಾಡಿದರು.
ನಾನು ಹಿಂದುತ್ವಕ್ಕೆ ಮಾಡಿದ ದ್ರೋಹ ಏನು ಅನ್ನೋದನ್ನು ನೀವು ಹೇಳಬೇಕು, ಅನ್ಯಮತೀಯ ಯುವತಿಯ ಜೊತೆಯಲ್ಲಿದ್ದ ಹಿಂದೂ ಯುಚಕನನ್ನು ರಾತ್ರೋರಾತ್ರಿ ಪೊಲೀಸ್ ಠಾಣೆಯಿಂದ ಬಿಡಿಸಿ ತಂದೆ. ಗೋಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದಾಗ ರಾತ್ರಿ 2 ಗಂಟೆಗೆ ಹೋಗಿ ಅವರನ್ನು ಬಿಡಿಸಿ ತಂದೆ. ಆದರೆ ನೀವು ಹಿಂದುತ್ವದ ಹೆಸರಿನಲ್ಲಿ ಏನು ಮಾಡ್ತಾ ಇದ್ದೀರಿ.
ನಿಮ್ಮ ಹಿಂದುತ್ವದ ಬಗ್ಗೆ ಬೆಳ್ತಂಗಡಿ ಜನ ಪ್ರಶ್ನಿಸುತ್ತಿದ್ದಾರೆ, ಅವರಿಗೆ ಉತ್ತರ ನೀಡುವ ಕೆಲಸವನ್ನು ಆದಷ್ಟು ಬೇಗ ಮಾಡಿ ಎಂದು ಹಿಂದು ಮುಖಂಡರ ವಿರುದ್ಧ ಶಾಸಕ ಹರೀಶ್ ಪೂಂಜಾ ಕಿಡಿ ಕಾರಿದ್ದಾರೆ.