LATEST NEWS
ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುವ ಕಿಡಿಗೇಡಿಗಳ ವಿರುದ್ದ ಕಠಿಣಕ್ರಮಕ್ಕೆ ಶಾಸಕ ಭರತ್ ಶೆಟ್ಟಿ ಆಗ್ರಹ

ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುವ ಕಿಡಿಗೇಡಿಗಳ ವಿರುದ್ದ ಕಠಿಣಕ್ರಮಕ್ಕೆ ಶಾಸಕ ಭರತ್ ಶೆಟ್ಟಿ ಆಗ್ರಹ
ಮಂಗಳೂರು ಸೆಪ್ಟೆಂಬರ್ 25: ಫೋರಂ ಫಿಜಾ ಮಾಲ್ ನಲ್ಲಿ ಯುವಕನಿಗೆ ಹಲ್ಲೆ, ಆರ್ ಎಸ್ ಎಸ್ ಗೆ ನಿಂದನೆ ಕೋಮು ಸೌಹಾರ್ದತೆ ಕದಡುವ ಯತ್ನ ಹಲ್ಲೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಡಾ.ಭರತ್ ಶೆಟ್ಟಿ ಆಗ್ರಹ
ಮಂಗಳೂರಿನ ಮಾಲ್ ಒಂದರಲ್ಲಿ ಯುವತಿಯೋರ್ವಳನ್ನು ಚುಡಾಯಿಸುತ್ತಿದ್ದ ಗುಂಪನ್ನು ತಡೆದು ಪ್ರಶ್ನಿಸಿದ ಹಾಗೂ ಹಿಂದೂ ರಾಷ್ಟ್ರ ಎಂದು ಹೇಳಿದ ಯುವಕನೋರ್ವನಿಗೆ ಯದ್ವಾ ತದ್ವ ಹೊಡೆದು ಗಾಯಗೊಳಿಸಿದ ಘಟನೆಯನ್ನು ಮಂಗಳೂರು ಉತ್ತರದ ಶಾಸಕ ಡಾ.ಭರತ್ ಶೆಟ್ಟಿ ಖಂಡಿಸಿದ್ದಾರೆ.

ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುವ ಇಂತಹ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸಿ ಇತರರಿಗೆ ಪಾಠವಾಗುವಂತೆ ಎಚ್ಚರಿಕೆ ನೀಡಬೇಕು ಯುವತಿಯನ್ನು ಚುಡಾಯಿಸುತ್ತಿದ್ದ ಗುಂಪನ್ನು ತಡೆದು ಪ್ರಶ್ನಿಸಿದ ಬಂಟ್ವಾಳದ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಇದಲ್ಲದೆ ಹಲ್ಲೆ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದು ಕೋಮು ಸೌಹಾರ್ದತೆಯನ್ನು ಕೆಡಿಸುವ ಯತ್ನವಾಗಿದೆ.ಇಂತಹ ಅನಾಗರಿಕ ಕೃತ್ಯಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ.
ಕಾನೂನು ಸುವ್ಯವಸ್ಥೆಗೆ ದಕ್ಕೆ ತಂದು ಕೋಮುಸೌಹಾರ್ದತೆ ಹಾಳುಗೆಡವಲು ಯತ್ನಿಸುತ್ತಿರುವ ಇಂತಹ ಪ್ರಚೋದನಾತ್ಮಕ ಗುಂಪುಗಳನ್ನು ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮಟ್ಟಹಾಕಬೇಕು.ಹಲ್ಲೆ ನಡೆಸಿದ ಯುವಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.