LATEST NEWS
ನನ್ನ ಹೆಸರು ಹೇಳಿ ವಸೂಲಿ ಮಾಡಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ -ಭ್ರಷ್ಟ ಅಧಿಕಾರಿಗಳ ವಿರುದ್ದ ಶಾಸಕ ಅಶೋಕ್ ಕುಮಾರ್ ರೈ ಗರಂ
ಪುತ್ತೂರು ಫೆಬ್ರವರಿ 02: ನನ್ನ ಹೆಸರು ಹೇಳಿ ಯಾವುದೇ ಸರ್ಕಾರಿ ಅಧಿಕಾರಿಗಳು ಜನರಿಂದ ನನ್ನ ಹೆಸರಲ್ಲಿ ಹಣ ಸಂಗ್ರಹಿಸಿದರೆ ಅಂಥ ಅಧಿಕಾರಿಗಳಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಯಾವುದೇ ಕೆಲಸಗಳಿಗೆ ಹಾಗೂ ಯಾವುದೇ ಅಧಿಕಾರಿಗೆ ಯಾರೂ ಹಣ ನೀಡಬೇಕಿಲ್ಲ. ಸ್ವಲ್ಪ ತಡವಾದರೂ ಹಣ ಕೊಡದೆ ನಿಮ್ಮ ಕೆಲಸ ಆಗುತ್ತದೆ. ಅಧಿಕಾರಿಗಳಿಗೆ ದುಡ್ಡು ನೀಡಿದವರು ಯಾರೂ ನನ್ನಲ್ಲಿ ಹೇಳುತ್ತಿಲ್ಲ. ಹಣ ನೀಡಿ ನನ್ನ ಬಳಿ ಹೇಳಿದರೆ ಅಂಥ ಅಧಿಕಾರಿಯಿಂದಲೇ ಹಣ ವಾಪಾಸ್ ತೆಗೆಸಿಕೊಡುತ್ತೇನೆ. ಕಂದಾಯ ಇಲಾಖೆಯ ಬಗರುಹುಕುಂ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬ ಸರ್ಕಾರದ ಈ ಆ್ಯಪ್ ವಿರುದ್ಧ ಧಿಕ್ಕಾರ ಕೂಗಿರುವುದು ಸಾಬೀತಾದರೆ ಆತನನ್ನು ತಕ್ಷಣದಿಂದ ಅಮಾನತು ಮಾಡಲಾಗುವುದು’ ಎಂದು ಅವರು ಹೇಳಿದರು.