LATEST NEWS
ಸಿಮೆಂಟ್ ಮಿಕ್ಸರ್ ಲಾರಿ ಹರಿದು 8 ವರ್ಷದ ಬಾಲಕಿ ಸಾವು
ಉಡುಪಿ ನವೆಂಬರ್ 14:ಸಿಮೆಂಟ್ ಮಿಕ್ಸರ್ ಲಾರಿ ಹರಿದು ಎಂಟು ವರ್ಷದ ಬಾಲಕಿ ಸಾವನಪ್ಪಿರುವ ಘಟನೆ ಉಡುಪಿ ಅಂಬಾಗಿಲು ಬಳಿ ನಡೆದಿದೆ.
ಮೃತ ಬಾಲಕಿಯನ್ನು ಪ್ರಣಮ್ಯ ಎಂದು ಗುರುತಿಸಲಾಗಿದೆ. ಪ್ರಣಮ್ಯ ತನ್ನ ತಾಯಿ ಜೊತೆ ಸ್ಕೂಟರ್ ಹಿಂಬದಿಯಲ್ಲಿ ಕುಳಿತು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ತಾಯಿ ಹಾಗೂ ಮಗಳು ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದರು. ಬಾಲಕಿ ಪ್ರಣಮ್ಯ ಮೇಲೆ ಲಾರಿ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಪ್ರಣಮ್ಯಳ ತಾಯಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯ ಬಗ್ಗೆ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.