LATEST NEWS
ಪುತ್ತೂರು ನಗರಸಭೆ ಬಿಜೆಪಿ ಉಳ್ಳಾಲ ಮತ್ತು ಬಂಟ್ವಾಳದಲ್ಲಿ ಅತಂತ್ರ ಸ್ಥಿತಿ

ಪುತ್ತೂರು ನಗರಸಭೆ ಬಿಜೆಪಿ ಉಳ್ಳಾಲ ಮತ್ತು ಬಂಟ್ವಾಳದಲ್ಲಿ ಅತಂತ್ರ ಸ್ಥಿತಿ
ಮಂಗಳೂರು ಸಪ್ಟೆಂಬರ್ 03: ದಕ್ಷಿಣ ಕನ್ನಡ ಜಿಲ್ಲೆಯ 2 ನಗರ ಸಭೆ ಹಾಗು 1 ಪುರಸಭೆಗೆ ನಡೆದ ಚನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗು ಬಂಟ್ವಾಳದ ಪುರಸಭೆಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
ಈ ಮೂರು ಕಡೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಪುತ್ತೂರಿನಲ್ಲಿ ಬಿಜೆಪಿ ಭಾರೀ ಅಂತರದ ಗೆಲುವಿನೊಂದಿಗೆ ಜಯಭೇರಿ ಬಾರಿಸಿದೆ. ಉಳ್ಳಾಲ ಹಾಗು ಬಂಟ್ವಾಳದಲ್ಲಿ ಸ್ಪಷ್ಟ ಬಹುಮತ ಯಾರಿಗೂ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಉಳ್ಳಾಲ ನಗರ ಸಭೆಯ ಒಟ್ಟು 31 ಸ್ಥಾನಗಳ ಪೈಕಿ ಬಿಜೆಪಿ 6, ಕಾಂಗ್ರೆಸ್ 13 , ಎಸ್ ಡಿ ಪಿ ಐ 6, ಜೆಡಿ ಎಸ್ 4 ಸೇರಿದಂತೆ 2 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಬಂಟ್ವಾಳ ಪುರಸಭೆಯ ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 12 , ಎಸ್ ಡಿ ಪಿ ಐ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಇಲ್ಲಿ ಸ್ಪಷ್ಟ ಬಹುವತ ದೊರೆಯದ ಕಾರಣ ಅತಂತ್ರ ಸ್ಥಿತಿ ನಿರ್ಮಾಣ ವಾಗಿದೆ.
ಪುತ್ತೂರು ನಗರ ಸಭೆ ಬಿಜೆಪಿ ಪಾಲಾಗಿದೆ, ಪುತ್ತೂರು ನಗರ ಸಭೆಗೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪುತ್ತೂರು ನಗರ ಸಭೆ ಬಿಜೆಪಿ ಪಾಲಾಗಿದ್ದು ಅಧಿಕಾರದ ಗದ್ದುಗೆ ಹಿಡಿಯಲಿದೆ. ಪುತ್ತೂರು ನಗರ ಸಭೆಯ ಒಟ್ಟು 31 ವಾರ್ಡುಗಳ ಪೈಕಿ ಬಿಜೆಪಿ 25 ವಾರ್ಡ್ ಗಳಲ್ಲಿ ಜಯಗಳಿಸುವ ಮೂಲಕ ಜಯಭೇರಿ ಬಾರಿಸಿದೆ. ಕಾಂಗ್ರೇಸ್ ಕೇವಲ 5 ಸ್ಥಾನಗಳಿಗೆ ತೃಪ್ತಿ ಪಟ್ಟರೆ, ಎಸ್.ಡಿ.ಪಿ.ಐ 1 ಸ್ಥಾನದೊಂದಿಗೆ ಖಾತೆ ತೆರೆದಿದೆ.