Connect with us

BANTWAL

ಮಿಥುನ್ ರೈ ಗೂಂಡಾವರ್ತನೆ, ಡಿಕೆಶಿ ಸಮುಖದಲ್ಲೇ ಕಾವ್ಯಾ ಹೆತ್ತವರಿಗೆ ಅವಮಾನ

 ಮಿಥುನ್ ರೈ ಗೂಂಡಾವರ್ತನೆ, ಡಿಕೆಶಿ ಸಮುಖದಲ್ಲೇ ಕಾವ್ಯಾ ಹೆತ್ತವರಿಗೆ ಅವಮಾನ

 

ಬಂಟ್ವಾಳ, ಅಕ್ಟೋಬರ್ 22 : ಸಚಿವರಾದ ಡಿ.ಕೆ ಶಿವಕುಮಾರ್ ಎದುರು ಕಾವ್ಯಾ ಹೆತ್ತವರಿಗೆ ಅವಮಾನ ಮಾಡುವ ಮೂಲಕ ಯುವ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷ ಮಿಥುನ್ ರೈ ಗೂಂಡಾ ವರ್ತನೆ ತೋರಿದ್ದಾರೆ.

ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು.

ಸಿ ಎಂ ಅವರಿಗೆ ಕಾವ್ಯ ಸಾವಿನ ಕುರಿತ ತನಿಖೆಯನ್ನು ಸಿಒಡಿ ಗೆ ಒಪ್ಪಿಸಬೇಕೆಂದು ಮನವಿ ನೀಡಲು ಕಾವ್ಯ ತಂದೆ, ತಾಯಿ, ತಂಗಿ ಮತ್ತು ಮನೆಯವರು ಆಗಮಿಸಿದ್ದರು.

ಬಿ.ಸಿ ರೋಡ್ ಬಸ್ಸು ನಿಲ್ದಾಣದ ಉದ್ಘಾಟನೆಯ ಸಂದರ್ಭದಲ್ಲಿ ಸಾವಿರಾರು ಜನರು ಸೇರಿದ್ದರಿಂದ ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು  ಕಾವ್ಯಾ ಪೋಷಕರಿಗೆ ಅಸಾಧ್ಯವಾಯಿತು.

ಈ ಸಂದರ್ಭದಲ್ಲಿ ನಿಲ್ದಾಣಕ್ಕೆ ಆಗಮಿಸಿದ  ಇಂಧನಸಚಿವ ಡಿ.ಕೆ ಶಿವಕುಮಾರ್ ರವರನ್ನು ಕಾವ್ಯ ತಾಯಿ ಮತ್ತು ಮನೆಯವರು ಭೇಟಿಯಾಗಿ ತಮಗೆ ಅನ್ಯಾಯವಾಗಿದೆ, ಕಾವ್ಯಳ ಸಾವಿಗೆ ನ್ಯಾಯ ಸಿಗುತ್ತಿಲ್ಲ ಎಂದು ಮನವಿ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಅಲ್ಲೆ ಸಮೀಪದಲ್ಲಿದ್ದ ಮಿಥುನ್ ರೈ ಆಕ್ರೋಶಗೊಂಡು ಇಲ್ಲಿ ಈ ವಿಷಯ ಮಾತನಾಡಬೇಡಿ, ಇಲ್ಲಿಂದ ಹೊರಟು ಹೋಗಿ ಎಂದು ಕೈಯಿಂದ ಅಡ್ಡಗಟ್ಟಿ ಮಾನವೀಯತೆ ಇಲ್ಲದಂತೆ ವರ್ತಿಸಿ ಅವಮಾನಿಸಿದ್ದಾರೆ.

ಡಿ ಕೆಶಿ , ಸಿ ಎಂ, ರೈ ಅವರನ್ನು ಸತ್ಕರಿಸುತ್ತಿರುವ ಮಿಥುನ್ ರೈ

ಇದರಿಂದ ಕಾವ್ಯಳ ತಾಯಿ ಮತ್ತು ಮನೆಯವರು ತುಂಬಾ ನೊಂದುಕೊಂಡರು. ಅಲ್ಲದೆ ಅಲ್ಲಿ ಸೇರಿದ್ದ ಜನರು ಮಿಥುನ್ ರೈ ದರ್ಪಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ವಿಧಾನ ಸಭಾ ಚುಣಾವಣೆಯಲ್ಲಿ ಮೂಡಬಿದರೆಯಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಂಬಲಿಸುತ್ತಿರುವ ಇವರು ಅದೇ ಕ್ಷೇತ್ರದ ಹೆಣ್ಣು ಮಗಳ ಸಾವಿಗೆ ನ್ಯಾಯ ಕೇಳಿದ ತಾಯಿಯನ್ನು ದರ್ಪದಿಂದ ಅವಮಾನಿಸಿದ್ದು ಮನಕಲುಕುವಂತಿತ್ತು.

ಕೆಲವು ದಿನಗಳ ಹಿಂದೆ ಮಾತೃ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಮಿಥುನ್ ರೈ ಮಗಳ ಸಾವಿಗೆ ನ್ಯಾಯ ಒದಗಿಸಲು ಪೇಚಾಡುತ್ತಿರುವ ಒಬ್ಬ ತಾಯಿಗೆ ಸಾವಿರಾರು ಜನರ ಎದುರಿನಲ್ಲಿ ಅವಮಾನಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *