Connect with us

DAKSHINA KANNADA

ಸರಕಾರಿ ಅಧಿಕಾರಿಗಳಿಗೆ ರಾಜಕೀಯ ಭಾಷಣ, ಸಾಧನಾ ಸಮಾವೇಶವಾಯಿತು ಕಾಂಗ್ರೇಸ್ ಮತಬೇಟೆಯ ಕಣ..

 

ಸರಕಾರಿ ಅಧಿಕಾರಿಗಳಿಗೆ ರಾಜಕೀಯ ಭಾಷಣ, ಸಾಧನಾ ಸಮಾವೇಶವಾಯಿತು ಕಾಂಗ್ರೇಸ್ ಮತಬೇಟೆಯ ಕಣ..

ಪುತ್ತೂರು,ಜನವರಿ 7: ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರದ ವಿವಿಧ ಯೋಜನೆಯಡಿ ನಡೆಸಲಾಗುವ 200 ಕೋಟಿಗೂ ಮಿಕ್ಕಿದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಪುತ್ತೂರು ತಾಲೂಕಿನ ಕಿಲ್ಲೆ ಮೈದಾನದಲ್ಲಿ ಪುತ್ತೂರು ತಾಲೂಕಿಗೆ ಸಂಬಂಧಪಟ್ಟ 66 ಕೋಟಿ ರೂಪಾಯಿಗಳ ಕಾಮಗಾರಿಗೆ ಅವರು ಚಾಲನೆ ನೀಡಿದರು. ಸರಕಾರದ ಕಾರ್ಯಕ್ರಮವಾದ ಕಾರಣ ಎಲ್ಲಾ ಸರಕಾರಿ ಅಧಿಕಾರಿಗಳೂ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಸುತ್ತೋಲೆಯನ್ನೂ ಸರಕಾರದ ವತಿಯಿಂದ ನೀಡಲಾಗಿತ್ತು.

ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸರಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ಕೇವಲ ಒಂದು ವಾಕ್ಯದಲ್ಲೇ ಕೊನೆಗೊಳಿಸಿ, ನಾಲ್ಕು ಜನರಿಗೆ ಪುರಸ್ಕಾರ ವಿತರಿಸಿ ಬಳಿಕ ಸರಕಾರಿ ಪ್ರಯೋಜಿತ ಕಾರ್ಯಕ್ರಮವನ್ನು ನೇರವಾಗಿ ತನ್ನ ಪಕ್ಷದ ಕಾರ್ಯಕ್ರಮವಾಗಿ ಬದಲಿಸಿದ್ದಾರೆ. ತನ್ನ ಭಾಷಣದ ತುಂಬಾ ತನ್ನ ವಿರೋಧಿಗಳನ್ನು ತೆಗಳಲು ಹಾಗೂ ಹೀಯಾಳಿಸಲು ಉಪಯೋಗಿಸಿಕೊಂಡಿದ್ದಾರೆ.

ಸರಕಾರಿ ಅಧಿಕಾರಿಗಳ ಮುಂದೆಯೇ ರಾಜಕೀಯ ಭಾಷಣ ಮಾಡುವ ಮೂಲಕ ತನ್ನ ರಾಜಕೀಯ ಬೇಳೆಯನ್ನು ಸರಕಾರದ ದುಡ್ಡಿನಲ್ಲೇ ಬೇಯಿಸಿಕೊಂಡಿದ್ದಾರೆ.  ಭಾಷಣದ ಉದ್ದಕ್ಕೂ ಅಮಿತ್ ಶಾ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗಡೆ, ಆರ್.ಎಸ್.ಎಸ್, ಭಜರಂಗದಳ, ಹಿಂದುತ್ವ, ಕೋಮುವಾದಿ ಎನ್ನುವ ನುಡಿಮುತ್ತುಗಳನ್ನು ಸುರಿಸಿದ ಸಿ.ಎಂ‌ ತಾನು ಮಾತನಾಡುತ್ತಿರುವುದು ಸರಕಾರಿ ಕಾರ್ಯಕ್ರಮದಲ್ಲಿ ಎನ್ನೋದನ್ನು ಮರೆತೇ ಬಿಟ್ಟಿದ್ದರು.

ಶಕುಂತಲಾ ಶೆಟ್ಟಿ ಮುಂದೆಯೂ ಶಾಸಕಿಯಾಗಲಿ, ಎಲ್ಲರೂ ಶಕುಂತಲಾ ಶೆಟ್ಟಿಯವರಿಗೇ ಮತ ಹಾಕಿ ಎಂದು ಮತ ಪ್ರಚಾರವನ್ನು ನಡೆಸಿದ್ದಾರೆ. ತನ್ನ ಭಾಷಣದಲ್ಲಿ ನಿರಂತರವಾಗಿ ಹೀಯಾಳಿಸುತ್ತಿದ್ದ ವ್ಯಕ್ತಿಗಳೂ ಕಟ್ಟುವ ತೆರಿಗೆ ಹಣದಿಂದಲೇ ಈ ರೀತಿಯ ಕಾರ್ಯಕ್ರಮ ನಡೆಯತ್ತಿದೆ ಎನ್ನುವುದನ್ನೂ ಮುಖ್ಯಮಂತ್ರಿ ಗಳು ಮರೆತಿದ್ದರು.

ಸರಕಾರಿ ಕಾರ್ಯಕ್ರಮವೆಂದರೆ ಅದು ಸಂಪೂರ್ಣ ಸರಕಾರಕ್ಕೆ ಸಂಬಂಧಪಟ್ಟ ವಿಚಾರಗಳಿಗೆ ಮಾತ್ರ ಸೀಮಿತವಾಗಬೇಕಿತ್ತು. ಇದನ್ನು ಬಿಟ್ಟು ರಜಾ ದಿನದಲ್ಲಿ ಕಾರ್ಯಕ್ರಮವನ್ನು ನಿಗಧಿ ಮಾಡಿ, ಎಲ್ಲಾ ಸರಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಫರ್ಮಾನು ಹೊರಡಿಸಿ, ಸಿಬ್ಬಂದಿಗಳ ಮುಂದೆಯೇ ರಾಜಕೀಯ ಭಾಷಣ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳೂ ಮೂಡಲಾರಂಭಿಸಿದೆ.

ರಾಜಕೀಯ ಪಕ್ಷಗಳ ಬೆದರಿಕೆಗೆ ಮಣಿದು ತನ್ನ ಭದ್ರತೆಯ ಹಿತದೃಷ್ಟಿಯಿಂದ ಜನ ಸಾಮಾನ್ಯನಿಗೆ ಎಷ್ಟೇ ತೊಂದರೆಯಾಗಲಿ ಎನ್ನುವ ರೀತಿಯಲ್ಲಿ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮ ಕಂಡು ಬಂದಿತ್ತು. ಮುಖ್ಯಮಂತ್ರಿಗಳ ಕಾರ್ಯಕ್ರಮ ಮಧ್ಯಾಹ್ನದ ಬಳಿಕ ನಿಗಧಿಯಾಗಿದ್ದರೂ ಬೆಳ್ಳಂಬೆಳಗ್ಗೆಯೇ ಸಾರ್ವಜನಿಕರಿಗೆ ತೊಂದರೆ ಕೊಡುವ ಅಗತ್ಯವಾದರೂ ಏನಿತ್ತು.

ರಾಜಕೀಯ ಜೀವನದಲ್ಲಿ ಕರಿಪತಾಕೆ,ಪ್ರತಿಭಟನೆ ಎದುರಿಸೋದು ಸಾಮಾನ್ಯವಾಗಿದ್ದರೂ, ಪುತ್ತೂರಿನಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮ ಅಕ್ಷರಶಃ ತುರ್ತುಪರಿಸ್ಥಿತಿಯನ್ನು ಹೇರಿದಂತಿತ್ತು.  ಪ್ರತಿಭಟನೆಯನ್ನು ಎದುರಿಸಲಾಗದವರು ಪ್ರತಿಭಟನೆ ನಡೆಸುವ ಸ್ಥಳಕ್ಕೆ ಭೇಟಿ ನೀಡದಿರುವುದೇ ಒಳಿತು. ಪುತ್ತೂರಿನಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿ ಯಾವ ರೀತಿಯಿತ್ತೆಂದರೆ, ಪ್ರತಿದಿನ ಮೇವು ಹರಸಿ ಹೋಗುವ ಜನುವಾರುಗಳ ಪಥವನ್ನೂ ಒತ್ತಾಯಪೂರ್ವಕವಾಗಿ ಡೈವರ್ಟ್ ಮಾಡಲಾಗುತ್ತಿತ್ತು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *