Connect with us

    LATEST NEWS

    ಶಿರೂರು ಶ್ರೀಗಳ ನಿಧನ ರಹಸ್ಯ ಬಿಚ್ಚಿಟ್ಟ ಶ್ರೀಗಳ ಆಪ್ತ

    ಶಿರೂರು ಶ್ರೀಗಳ ನಿಧನ ರಹಸ್ಯ ಬಿಚ್ಚಿಟ್ಟ ಶ್ರೀಗಳ ಆಪ್ತ

    ಉಡುಪಿ ಜುಲೈ 20: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಕೈವಾಡ ಇದೆ ಎಂದು ಶಿರೂರು ಶ್ರೀಗಳ ಆಪ್ತರೊಬ್ಬರು ರಹಸ್ಯ ಬಿಚ್ಚಿಟ್ಟಿದ್ದಾರೆ.

    ಶಿರೂರು ಶ್ರೀ ಅಸಹಜ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಕೈವಾಡ ವಿದ್ದು, ಶಿರೂರು ಮಠಕ್ಕೆ ಸುಮಾರು 500 ಕೋಟಿ ರೂ ಮೌಲ್ಯದ ಆಸ್ತಿ ಇತ್ತು ಎಂದು ಹೇಳಿದ್ದಾರೆ. ಇದು ಶಿರೂರು ಮಠದ ದ್ವಂದ್ವ ಮಠ ಸೋದೆ ಮಠದದೊಂದಿಗೆ ಸಂಬಂದವಿರುವ ಲ್ಯಾಂಡ್ ಮಾಫಿಯಾ ಕೈವಾಡದಿಂದಾಗಿ ಶಿರೂರು ಶ್ರೀಗಳ ಅಸಹಜ ಸಾವನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.

    ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನದ ಬಳಿಕ ಆಸ್ತಿಯನ್ನು ಸೋದೆ ಮಠದ ವಶಕ್ಕೆ ಪಡೆಯುವ ಹುನ್ನಾರ ನಡೆಸಲಾಗಿದ್ದು, ಮಠದ ದೇವರ ಮೇಲಿದೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಅಲ್ಲದೆ ಇತ್ತೀಚೆಗೆ ಬಂದ ಚಿನ್ನಾಭರಣದ ಬಗ್ಗೆ ಲೆಕ್ಕ ವಿರಿಸಲಾಗಿಲ್ಲ ಈ ಹಿನ್ನೆಲೆಯಲ್ಲಿ ಮಠದ ಆಸ್ತಿ ಅರ್ಹರಿಗೇ ಸಲ್ಲಬೇಕಿದ್ದು, ಹೊರಗಿನ ಅರ್ಚಕರನ್ನು ನೇಮಿಸುವುದಕ್ಕೆ ತಡೆ ನೀಡಬೇಕಿದೆ ಎಂದ ಹೇಳಿದ್ದಾರೆ.

    ಸರಕಾರ ಈ ಕೂಡಲೇ ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಶಿರೂರು ಮಠದ ಆಸ್ತಿಯನ್ನು ಬೇರೆಯವರು ವಶಪಡಿಸಿಕೊಳ್ಳುವ ಪ್ರಯತ್ನವನ್ನು ಸರಕಾರ ತಡೆಯಬೇಕಿದೆ ಎಂದು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *