LATEST NEWS
ವಿದ್ಯಾರ್ಥಿ ದಿಗಂತ್ ನಾಪತ್ತೆಯ ಹಿಂದೆ ಗಾಂಜಾ ವ್ಯಸನಿಗಳ ಕೈವಾಡ ಶಂಕೆ – ವಿಶ್ವ ಹಿಂದೂ ಪರಿಷದ್

ಮಂಗಳೂರು ಫೆಬ್ರವರಿ 28: ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ಹಿಂದೆ ಗಾಂಜಾ ವ್ಯಸನಿಗಳ ಕೈವಾಡ ಇರುವ ಶಂಕೆ ಯನ್ನು ವಿಶ್ವ ಹಿಂದೂ ಪರಿಷದ್ ವ್ಯಕ್ತಪಡಿಸಿದೆ.
ವಿಧ್ಯಾರ್ಥಿ ದಿಗಂತ್ ನಾಪತ್ತೆಯಾಗಿ 2 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಫರಂಗಿಪೇಟೆಯ ಸುತ್ತಮುತ್ತ ಡ್ರಗ್ಸ್, ಗಾಂಜಾ ವ್ಯಸನಿಗಳ ಒಂದು ದೊಡ್ಡ ತಂಡ ಇದೆ ಎಂಬುದು ಅಲ್ಲಿಯ ಅಕ್ಕಪಕ್ಕದ ಜನ ಮಾತನಾಡುತ್ತಿ ದ್ದಾರೆ. ಆದ್ದರಿಂದ ಈ ನಾಪತ್ತೆಯ ಹಿಂದೆ ಹಲವು ಸಂಶಯಗಳು ವ್ಯಕ್ತವಾಗುತ್ತಿದ್ದು ಇದರ ಹಿಂದೆ ಗಾಂಜಾ ವ್ಯಸನಿಗಳ ತಂಡದ ಕೈವಾಡ ಇರಬಹುದು ಎಂಬುದು ಸಂಶಯ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿ ನಾಪತ್ತೆಯಾದ ಸಮಯದಲ್ಲಿ ಅಪರಿಚಿತ ಕ್ವಾಲ್ಲಿಸ್ ಕಾರು ಆ ಜಾಗದಲ್ಲಿ ಓಡಾಡಿದ್ದು ಆಂಜನೇಯ ದೇವಸ್ಥಾನದ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೋಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ನಾಪತ್ತೆಯಾದವನನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶ್ವ ಹಿಂದೂ ಪರಿಷದ್ ಆಗ್ರಹಿಸುತ್ತದೆ.

ದೇವಸ್ಥಾನಕ್ಕೆಂದು ಹೊರಟವನು ಮನೆಗೆ ಹಿಂದಿರುಗದಿರುವುದರಿಂದ ಮನೆಯವರೆಲ್ಲರೂ ಗಾಬರಿಗೊಂಡಿದ್ದಾರೆ. ಅವರ ಮನೆಗೆ ಹೋಗಿ ತಂದೆ ತಾಯಿ ಕುಟುಂಬದವರಿಗೆ ಧೈರ್ಯ ತುಂಬಲಾಯಿತು.ಎಂದು ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.