LATEST NEWS
ನಾಪತ್ತೆಯಾದ ಕಾಸರಗೋಡಿನ 10 ಮಂದಿ ಐಸಿಸ್ ಸೇರ್ಪಡೆ ಶಂಕೆ
ನಾಪತ್ತೆಯಾದ ಕಾಸರಗೋಡಿನ 10 ಮಂದಿ ಐಸಿಸ್ ಸೇರ್ಪಡೆ ಶಂಕೆ
ಮಂಗಳೂರು ಜೂನ್ 28: ಕೇರಳ ಮತ್ತು ಐಸಿಸ್ ಉಗ್ರ ಸಂಘಟನೆಯ ನಂಟಿನ ವಿಚಾರ ಮತ್ತೆ ಸುದ್ದಿಯಾಗಿದೆ. ಇತ್ತೀಚೆಗೆ ಕಾಸರಗೋಡಿಗೆ ಸೇರಿದ ಎರಡು ಕುಟುಂಬಗಳ 10 ಮಂದಿ ನಾಪತ್ತೆಯಾಗಿದ್ದು, ಐಸಿಸ್ ಸೇರಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಸರಗೋಡು ಚೆಮ್ನಾಡ್ ನ 10 ಮಂದಿ ಇತ್ತೀಚೆಗೆ ದುಬೈಗೆ ತೆರಳಿದ್ದರು, ನಂತರ ಅವರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ದೊರೆಯದ ಹಿನ್ನಲೆಯಲ್ಲಿ ಕಾಸರಗೋಡಿನ ಚೆಮ್ನಾಡ್ ಮುಂಡಾಂಕುಳದ ಕುನ್ನಿಲ್ ಹೌಸ್ ನ ಅಬ್ದುಲ್ ಹಮೀದ್ ಅವರು ಕಾಸರಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸವಾದ್ (35), ಪತ್ನಿ ನಸೀರಾ(25), ಮಕ್ಕಳಾದ ಮುಸ್ಬಾ (6), ಮರ್ಜಾನ (3), ಮುಖಾಬಿಲ್ (11 ತಿಂಗಳು) , ಸವಾದ್ ನ 2 ನೇ ಪತ್ನಿ ಪಾಲ್ಘಾಟ್ ನಿವಾಸಿ ರೆಹಮ್ಮಾತ್ (25) ನಾಪತ್ತೆಯಾದ ಕುಟುಂಬದ ಸದಸ್ಯರು. ಅಲ್ಲದೇ ಕಾಸರಗೋಡಿನ ಅಣಂಗೂರಿನ ಕುಟುಂಬದ ಸದಸ್ಯರಾದ ಅನ್ವರ್ ಕೊಲ್ಲಂಪಾಡಿ, ಪತ್ನಿ ಝೀನತ್, ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ನಾಪತ್ತೆಯಾದ ಸದಸ್ಯರು ಜಾಗತಿಕ ಉಗ್ರ ಸಂಘಟನೆ ಐಸಿಸ್ ಸೇರಿರುವ ಆತಂಕವನ್ನು ಕುಟುಂಬದ ಸದಸ್ಯರು ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಪೊಲೀಸ್, ಎನ್ ಐಎ ತಂಡದಿಂದ ತನಿಖೆ ಆರಂಭವಾಗಿದೆ.
2016ರಲ್ಲಿ ಕಾಸರಗೋಡಿನ 17 ಮಂದಿ ಐಸಿಸ್ ಸೇರ್ಪಡೆಯಾಗಿದ್ದರು ಎಂಬ ಮಾಹಿತಿ ಎನ್ಐಎ ಗೆ ಲಭಿಸಿತ್ತು.