Connect with us

BELTHANGADI

ಬೆಳ್ತಂಗಡಿ – ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಹಿಂದೂ ಯುವಕನ ಜೊತೆ ವಿವಾಹವಾಗಿ ಪತ್ತೆ

ಬೆಳ್ತಂಗಡಿ ಜನವರಿ 10: ವಾರದ ಹಿಂದೆ ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಇದೀಗ ಹಿಂದೂ ಯುವಕನ ಜೊತೆ ವಿವಾಹವಾಗಿ ಪತ್ತೆಯಾಗಿದ್ದಾಳೆ. ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಹರೀಶ್ ಗೌಡ-ಸುಹಾನಾ ವಿವಾಹವಾಗಿದ್ದಾರೆ. ಬಳಿಕ ಜೋಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದಾರೆ.


ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಹರೀಶ್ ಗೌಡ ಹಾಗೂ ಮೂಡಬಿದಿರೆಯ ಸುಹಾನ (19) ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಈ ನಡುವೆ ವಾರದ ಹಿಂದೆ ಮೂಡಬಿದಿರೆಯ ಕಂಪ್ಯೂಟರ್ ಕ್ಲಾಸ್ ಗೆ ತೆರಳಿದ್ದ ಸುಹಾನ ನಾಪತ್ತೆಯಾಗಿದ್ದಳು, ಈ ಬಗ್ಗೆ ಆಕೆಯ ಪೋಷಕರು ಮೂಡಬಿದಿರೆ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇದೀಗ ಇಂದು ಸುಹಾನ ಮತ್ತು ಹರೀಶ್ ಗೌಡ ದೇವಸ್ಥಾನದಲ್ಲಿ ಮದುವೆಯಾಗಿ ಪತ್ತೆಯಾಗಿದ್ದಾರೆ. ಅಲ್ಲದೆ ಬೆಳ್ತಂಗಡಿ ವಿವಾಹ ನೊಂದಣಿ ಕಛೇರಿಯಲ್ಲಿ ಜೋಡಿ ವಿವಾಹ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ನಡುವೆ ಸುಹಾನ ಪತ್ತೆಯಾದ ವಿಚಾರ ಕೇಳಿ ಬೆಳ್ತಂಗಡಿಗೆ ಆಕೆಯ ಪೋಷಕರು ಆಗಮಿಸಿದ್ದರು, ಆದರೆ ತಾವು ವಿವಾಹವಾಗಿರುವುದಾಗಿ ಹೇಳಿದ ಹಿನ್ನಲೆ ಆಕೆಯನ್ನು ಬಿಟ್ಟು ಪೋಷಕರು ತೆರಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *