ಮಡಿಕೇರಿ ಸೆಪ್ಟೆಂಬರ್ 16: ಭಾರೀ ಸುದ್ದಿ ಮಾಡಿದ್ದ ಮಡಿಕೇರಿಯ ಚೆಂಬು ಗ್ರಾಮ ಪಂಚಾಯತ್ ಸದಸ್ಯೆ ನಾಪತ್ತೆ ಪ್ರಕರಣ ದುರಂತ ಅಂತ್ಯಕಂಡಿದ್ದು, ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ದಬ್ಬಡ್ಕ ಕಮಲಾ (35) ಹಾಗೂ ಕಮಲ ಜೊತೆ ನಾಪತ್ತೆಯಾಗಿದ್ದ ಮುತ್ತು(50) ಮೃತ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಕಮಲಾ(35)ಹಾಗೂ ಮುತ್ತು(50) ಎಂಬಾತ ಒಂದೇ ಮರದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಸಂಜೆಯಿಂದ ಇಬ್ಬರೂ ನಾಪತ್ತೆಯಾಗಿದ್ದು ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ದೊರೆತಿದೆ. ಕಮಲಾ ಬುಧವಾರ ಸಂಜೆಯಿಂದ ಮನೆಯಲ್ಲಿ ಕಾಣಿಸದ್ದರಿಂದ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಮೊದಲು ಚೆಂಬು ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ದಬ್ಬಡ್ಕ ಕಮಲಾ ಅವರು ಸೆಪ್ಟೆಂಬರ್ 15 ರ ಬುಧವಾರ ಸಂಜೆ ತನ್ನ ಮನೆಯ ಸನಿಹದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೆಲವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮುತ್ತು ಎಂಬ ನೆರೆಮನೆಯಾತ ಆಕೆಯನ್ನು ಇದ್ದಕ್ಕಿದ್ದಂತೆ ದಬ್ಬಡ್ಕ ಸೇತುವೆಯಿಂದ ಕೆಳಗೆ ತಳ್ಳಿ ಹಾಕಿದ್ದರು ಎನ್ನಲಾಗಿತ್ತುಘಟನೆ ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, ಕೆಳಕ್ಕೆ ಬಿದ್ದಿರುವ ಗ್ರಾ. ಪಂ. ಸದಸ್ಯೆ ಕಮಲ ಅವರ ಸುಳಿವು ಕೂಡ ದೊರೆತಿಲ್ಲ. ಸೇತುವೆಯಿಂದ ಮುತ್ತು ಕೆಳಕ್ಕೆ ಹೋಗಿ ಆಕೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿರಬಹುದು ಎಂದು ವದಂತಿ ಹರಿದಾಡುತ್ತಿತ್ತು.