ನಾಪತ್ತೆಯಾಗಿದ್ದ ಆಟೋ ಚಾಲಕ ಶವವಾಗಿ ಪತ್ತೆ

ಮಂಗಳೂರು,ಜನವರಿ 10: ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಹಳೆಯಂಗಡಿ ಆಟೋರಿಕ್ಷಾ ಚಾಲಕ ಸಂಪತ್ ಕರ್ಕಡ (50) ಎಂಬವರು ಮೃತದೇಹ ಹೆಜಮಾಡಿ ಟೋಲ್ ಗೆಟ್ ಸಮೀಪ ಅವರಾಳು,ಮಟ್ಟು ಎಂಬಲ್ಲಿನ ಶಾಂಭವಿ ನದಿಯ ನಿರ್ಮಾಣ ಹಂತದ ಸೇತುವೆಯ ಬಳಿ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ.

ಹಳೆಯಂಗಡಿ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಅವಿವಾಹಿತ ಸಂಪತ್ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಆಗಿದ್ದರು.

ಕಳೆದ ಮೂರು ತಿಂಗಳ ಹಿಂದಷ್ಷೇ ಸಂಪತ್ ರವರ ಸಹೋದರ ರಿಕ್ಷಾ ಚಾಲಕ ನಮೀನ್ ಕರ್ಕಡ ಎಂಬುವವರು ಹಳೆಯಂಗಡಿ ಸಮೀಪ ರೈಲಿಗೆ ತಲೆಕೊಟ್ಟು ಮೃತಪಟ್ಟಿದ್ದರು.

ಇದೀಗ ಮೂರು ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಎರಡು ಜೀವ ದಾರುಣ ಸಾವನ್ನಪ್ಪಿರುವುದು ಸಂಪತ್ ಅವರ ಕುಟುಂಬಕ್ಕೆ ಆಘಾತ ಉಂಟಾಗಿದೆ. ಪಡುಬಿದ್ರೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.