LATEST NEWS
ಎಂಇಎಸ್ ಪುಂಡರ ಗೂಂಡಾಗಿರಿ – ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸೂಕ್ತಕ್ರಮ – ಸಚಿವ ಸುನಿಲ್ ಕುಮಾರ್

ಉಡುಪಿ ಡಿಸೆಂಬರ್ 18: ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗುಂಡಾಗಿರಿಯನ್ನು ತೀವ್ರವಾಗಿ ಖಂಡಿಸಿರುವ ಇಂದನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಇಂತಹ ಘಟನೆ ಮುಂದೆ ಮರುಕಳಿಸಲು ಬಿಡುವುದಿಲ್ಲ, ಈ ಘಟನೆಯಲ್ಲಿ ಭಾಗಿಯಾದ ವ್ಯಕ್ತಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಕನ್ನಡ ಭಾಷೆ, ಸಾಹಿತ್ಯ, ಧ್ವಜದ ಬಗ್ಗೆ ಅಪಾರವಾದ ಗೌರವ ಇರಲೇಬೇಕು, ಅನ್ಯಭಾಷೆ ಮಾತನಾಡಿದರೂ ಕನ್ನಡದ ಬಗ್ಗೆ ಗೌರವ ತೋರಿಸುವುದು ನಮ್ಮ ಕರ್ತವ್ಯ, ಇತ್ತೀಚೆಗೆ ಕೆಲ ದುಷ್ಕರ್ಮಿಗಳು ಕನ್ನಡ ಬಾವುಟಕ್ಕೆ ಹಾನಿ ಮಾಡಿದ್ದಾರೆ. ಕನ್ನಡದ ವಿರುದ್ಧ ಅಗೌರವ ತೋರಿಸುವುದನ್ನು ಸಹಿಸುವುದಿಲ್ಲ ಎಂದರು, ಈ ರೀತಿಯ ಕೃತ್ಯ ಯಾರೂ ಮಾಡದಂತೆ ಸೂಕ್ತ ಬಂದು ಬಸ್ತ್ ಮಾಡಲಾಗುವುದು ಎಂದರು.
