LATEST NEWS
ಬೇಕಾಬಿಟ್ಟಿ ದರ ಏರಿಸುತ್ತಿದ್ದ ವಿಮಾನ ಸಂಸ್ಥೆಗಳ ಕಿವಿ ಹಿಂಡಿದ ಸಚಿವ ಸುರೇಶ್ ಪ್ರಭು
ಬೇಕಾಬಿಟ್ಟಿ ದರ ಏರಿಸುತ್ತಿದ್ದ ವಿಮಾನ ಸಂಸ್ಥೆಗಳ ಕಿವಿ ಹಿಂಡಿದ ಸಚಿವ ಸುರೇಶ್ ಪ್ರಭು
ಮಂಗಳೂರು ಅಗಸ್ಟ್ 21: ಬೇಕಾಬಿಟ್ಟಿ ವಿಮಾನ ಪ್ರಯಾಣ ದರ ಏರಿಸುತ್ತಿದ್ದ ವಿಮಾನ ಸಂಸ್ಥೆಗಳಿಗೆ ದರ ಏರಿಸದಂತೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಕಿವಿ ಹಿಂಡಿದ್ದಾರೆ. ಮಂಗಳೂರು ಬೆಂಗಳೂರು ವಿಮಾನಯಾನಕ್ಕೆ ಬೇಕಾಬಿಟ್ಟಿ ದರ ವಿಧಿಸುತ್ತಿದ್ದ ವಿಮಾನಸಂಸ್ಥೆಗಳಿಗೆ ದರ ಇಳಿಸುವಂತೆ ಸುರೇಶ್ ಪ್ರಭು ಆದೇಶಿಸಿದ್ದರು.
ಮಂಗಳೂರು – ಬೆಂಗಳೂರು ಬಸ್ ಸಂಚಾರ, ರೈಲು ಸಂಚಾರದಲ್ಲಿ ವ್ಯತ್ಯಯಲಾಗಿದ್ದಲ್ಲದೇ ಸಂಪಾಜೆ, ಶಿರಾಢಿ ಘಾಟ್ ನಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಬೆಂಗಳೂರಿಗೆ ತೆರಳಲು ಯಾವುದೇ ಪರ್ಯಾಯ ಮಾರ್ಗಗಳಿಗಲ್ಲದೆ ಸಂಕಷ್ಟ ಅನುಭವಿಸಿದ್ದರು.
ಈ ನಡುವೆ ಅಗತ್ಯ ಕೆಲಸಗಳಿಗೆ ತುರ್ತಾಗಿ ಬೆಂಗಳೂರಿಗೆ ಹೋಗುವವರು ವಿಮಾನವನ್ನು ಆಶ್ರಯಿಸಿದ್ದರು. ಈ ಹಿನ್ನಲೆಯಲ್ಲಿ ಮಂಗಳೂರು ನಿಂದ ಬೆಂಗಳೂರಿಗೆ ತೆರಳುವ ಎಲ್ಲಾ ವಿಮಾನಗಳು ಬೇಕಾಬಿಟ್ಟಿ ದರ ಏರಿಸಿದ್ದವು. ಸಾಮಾನ್ಯವಾಗಿ 5 ಸಾವಿರ ರೂಪಾಯಿ ವರೆಗೆ ಇರುತ್ತಿದ್ದ ಮಂಗಳೂರು ಬೆಂಗಳೂರು ವಿಮಾನದರ ಒಂದೇ ಸಮನೆ 20 ಸಾವಿರ ರೂಪಾಯಿ ದಾಟಿತ್ತು.
ಈ ಹಿನ್ನಲೆಯಲ್ಲಿ ತುರ್ತಾಗಿ ಬೆಂಗಳೂರಿಗೆ ಪ್ರಯಾಣಿಸುವ ಸಾರ್ವಜನಿಕರು ವಿಮಾನದ ಟಿಕೆಟ್ ದರ ನೋಡಿ ಪ್ರಯಾಣವನ್ನು ರದ್ದು ಪಡಿಸಿದ್ದರು. ಅಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸಂಸದ ನಳಿನ್ ಕುಮಾಕ್ ಕಟೀಲ್ ಮತ್ತು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ವಿಮಾನದ ದರ ಇಳಿಕೆ ಬಗ್ಗೆ ಕೇಂದ್ರ ಸಚಿವ ಸುರೇಶ್ ಪ್ರಭು ಅವರಿಗೆ ಒತ್ತಾಯಿಸಿದ್ದರು.
ಈ ಹಿನ್ನಲೆಯಲ್ಲಿ ವಿಮಾನ ಪ್ರಯಾಣ ದರ ಹೆಚ್ಚು ಏರಿಕೆ ಮಾಡಬಾರದೆಂದು ವಿಮಾನ ಸಂಸ್ಥೆಗಳಿಗೆ ಸುರೇಶ್ ಪ್ರಭು ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಕೂಡ ಮಾಡಿದ್ದರು.