UDUPI
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಕುಂದಾಪುರದ ಶಿಕ್ಷಕರೋರ್ವರ ಶ್ಲಾಘನೆ
ವಿಧ್ಯಾರ್ಥಿಗಳ ಮನೆಗೆ ತೆರಳಿ ವಿಧ್ಯಾರ್ಜನೆ ನಡೆಸುತ್ತಿರುವ ಬಾಬು ಶೆಟ್ಟಿ
ಉಡುಪಿ ಜೂ.10: ತನ್ನ ಶಾಲೆಯ ಎಸ್ಎಸ್ಎಲ್ ಸಿ ಮಕ್ಕಳ ಮನೆಗೆ ತಾನೇ ತೆರಳಿ ಪಾಠ ಹೇಳಿ ಕಳೆದ 23 ವರ್ಷಗಳಿಂದ ಎಸ್ಎಸ್ಎಲ್ ಸಿಯಲ್ಲಿ ಶೇಕಡ 100 ಫಲಿತಾಂಶ ಬರುವಂತೆ ಮಾಡುತ್ತಿರುವ ಶಿಕ್ಷಕರೋರ್ವರಿಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇವರ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ. ಉಡುಪಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗಳ ಸಿದ್ದತೆಯ ಪರಿಶೀಲನಾ ಸಭೆ ನಡೆಸುತ್ತಿರುವಾಗ ಇವರ ಪರಿಚಯವಾಗಿದೆ ಎಂದು ತಿಳಿಸಿರುವ ಸುರೇಶ್ ಕುಮಾರ್ ಇವರು ಕುಂದಾಪುರ ವಲಯ ಹೆಸ್ಕೂತ್ತುರು ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಾಬು ಶೆಟ್ಟಿ ಅವರು ತನ್ನ ಶಾಲೆಯ 43 ಮಕ್ಕಳ ಮನೆಗೆ ತಾನೇ ತೆರಳಿ ಅವರಿಗೆ ಪಾಠ ಹೇಳಿ, ತಿಳಿಯದ ಸಂಗತಿಗಳ ಕುರಿತು ಮತ್ತೆ ಮತ್ತೆ ತಿಳುವಳಿಕೆ ಮಾಡುತ್ತಿದ್ದಾರೆ.
ತನ್ನ ಶಾಲೆಯ ಕಡುಬಡವ ವಿಧ್ಯಾರ್ಥಿಗಳ ಮನೆಗೂ ಹೋಗಿ ಅವರು ವಿದ್ಯಾರ್ಜನೆ ಮಾಡುತ್ತಿದ್ದು ಅವರಿಗೆ ಪೋನ್ ಮಾಡಿ ಅಭಿನಂಧನೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.