Connect with us

    LATEST NEWS

    ಬೀದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ ಸಚಿವೆ ನಿರ್ಮಲಾ ಸೀತಾರಾಮನ್

    ಚೆನ್ನೈ, ಅಕ್ಟೋಬರ್ 09 : ರಾಜಕಾರಣಿಗಳು, ಸೆಲೆಬ್ರೆಟಿಗಳು, ಸಾಮಾನ್ಯ ಜನರಂತೆ ಅಲ್ಲಿ ಇಲ್ಲಿ ಓಡಾಡೋದೇ ಇಲ್ಲ. ಇನ್ನೂ ಮಾರ್ಕೆಟ್ ಗೆ ಹೋಗಿ ತರಕಾರಿ ತರೋದಂತೂ ದೂರದ ಮಾತು.. ಇಂಥಹದ್ದರಲ್ಲಿ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾವೇ ತರಕಾರಿ ಮಾರು ಕಟ್ಟೆಗೆ ಹೋಗಿ ಖುದ್ದು ತಾವೇ ತರಕಾರಿಯನ್ನ ಆಯ್ಕೆ ಮಾಡಿಕೊಂಡು ಮನೆಗೆ ತರಕಾರಿ ತೆಗೆದುಕೊಂಡು ಹೋಗಿದ್ದಾರೆ.

    ಅಬ್ಬಬ್ಬ ಹಣಕಾಸು ಸಚಿವೆ ಹೀಗೂ ಮಾಡಬಹುದು ಅಂತಾ ಅಚ್ಚರಿ ಅನಿಸಿದರೂ ಇದು ನಿಜ. ತರಕಾರಿ ಮಾರ್ಕೆಟ್ ಗೆ ಹೋಗಿರೋ ವಿಡಿಯೋವನ್ನ ನಿರ್ಮಲಾ ಸೀತಾರಾಮನ್ ಅವರ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗಿದೆ. ಶನಿವಾರ ತಮಿಳುನಾಡಿನ ಚೆನ್ನೈನ ಮೈಲಾಪುರ ಪ್ರದೇಶದಲ್ಲಿ ಬೀದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸೋ ವಿಡಿಯೋವನ್ನ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ., ಖರೀದಿ ಬಳಿಕ ಕೆಲ ವ್ಯಾಪಾರಸ್ಥರೊಂದಿಗೆ ನಿರ್ಮಲಾ ಸೀತಾರಾಮನ್ ಮಾತುಕತೆ ನಡೆಸಿದ್ದು, ವ್ಯಾಪಾರಸ್ಥರ ಕಷ್ಟವನ್ನೂ ಆಲಿಸಿದ್ದಾರೆ.

    ವೀಡಿಯೋದಲ್ಲಿ ನಿರ್ಮಲಾ ಅವರು ಕೆಲ ಸಿಹಿ ಗೆಣಸುಗಳನ್ನು ಖರೀದಿಸಿದ್ದು, ಹಾಗಲಕಾಯಿ ಯನ್ನೂ ಖರೀದಿಸಿರೋ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿದ್ದು, ತರಕಾರಿ ಬೆಲೆಗಳು ಸಹ ಗಗನಕ್ಕೇರುತ್ತಿವೆ. ಇದೇ ವೇಳೆ ಹಣಕಾಸು ಸಚಿವೆಯಾಗಿ ಮಾರುಕಟ್ಟೆಗೆ ಭೇಟಿ ನೀಡಿ ತರಕಾರಿ ಖರೀದಿಸಿರೋದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *