DAKSHINA KANNADA
ನೀರುಮಾರ್ಗ ಬಿತ್ತ್ ಪಾದೆಯ ಅಕ್ರಮ ಕಲ್ಲು ಕೊರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳಿಂದ ದಾಳಿ..!

ಮಂಗಳೂರು : ಅಷ್ಟೇನು ಸುಶಿಕ್ಷಿತರಲ್ಲದ ಇಲ್ಲಿನ ಜನ ನಿತ್ಯ ಭೀತಿಯಲ್ಲಿ ಜೀವನ ಕಳೆಯುವಂತಾಗಿತ್ತು. ಯಾವಾಗ ಏನಾಗುತ್ತೋ ಅಂತಾ ಪುಟ್ಟ ಮಕ್ಕಳೊಂದಿಗೆ ಜೀವಭಯದಲ್ಲೇ ದಿನದೂಡುತ್ತಿದ್ದರು ಇಲ್ಲಿನ ಜನ. ಇನ್ನು ಕೇಳೊಕ್ಕೆ ಅಂತಾ ಹೋದ್ರೆ ಜೀವ ಬೆದರಿಗೆ ಬೇರೆ…!
ಯಸ್ ಇದು ಮಂಗಳೂರು ನಗರದಿಂದ ಅಲ್ಪ ದೂರದಲ್ಲಿರುವ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿತ್ತುಪಾದೆ ಪ್ರದೇಶದ ಜನ್ರ ನಿತ್ಯ ಗೋಳಿನ ಕಥೆಯಿದು ದಿನಾ ಬೆಳಗಾದ್ರೆ ಸಾಕೂ ಸನಿಹದ ಅಕ್ರಮ ಗಣಿಗಾರಿಕೆಯ ಕೋರೆಯಲ್ಲಿ ಭಯಾನಕ ಸ್ಪೋಟಕಗಳ ಶಬ್ದ.

ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಉಳ್ಳಾಲ ಮೂಲದ ವ್ಯಕ್ತಿಯೊಬ್ಬರು ಅಕ್ರಮ ಗಣಿಗಾರಿಕೆ ಮಾಡುವ ಮೂಲಕ ಕಲ್ಲಿನ ಕೋರೆಯಲ್ಲಿ ಸ್ಪೋಟಕಗಳ ಬಳಕೆ ಮಾಡಿ ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದ್ದಾರೆ…ಇದೀಗಾ ಕೆಲ ತಿಂಗಳಿನಿಂದ ಅವ್ಯಾಹತವಾಗಿ ನಡೆಯುವ ಸ್ಪೋಟಕದಿಂದ ಸ್ಥಳೀಯ ಗ್ರಾಮದ ಇಪ್ಪತ್ತಕ್ಕೂ ಅಧಿಕ ಮನೆಗಳು, ಮಾತ್ರವಲ್ಲದೆ ಪಕ್ಕದ ಮಸೀದಿ ಗೋಡೆ, ಗಾಜು ಬಿರುಕು ಬಿಟ್ಟು ಕುಸಿದು ಬೀಳುವ ಹಂತಕ್ಕೆ ತಲುಪಿದೆ..ಈ ಬಗ್ಗೆ ಹಲವಾರು ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರಿಗೆ ಮನವಿ ನೀಡಿದ್ರು ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮ ಗಣಿಕೋರರ ಬೆನ್ನಿಗೆ ನೀರುಮಾರ್ಗ ಗ್ರಾಮ ಪಂಚಾಯತ್ ನಿಂತಿದೆ ಎಂದು ಸ್ಥಳೀಯ ಪ್ರಮುಖರಾದ ಬಿತ್ತುಪಾದೆ ಮಸೀದಿ ಮಾಜಿ ಅಧ್ಯಕ್ಷ ಶಮೀರ್..
ಈ ಅಕ್ರಮ ಗಣಿಗಾರಿಕೆಯ ಹಿಂದೆ ನೀರುಮಾರ್ಗ ಗ್ರಾಮ ಪಂಚಾಯತ್..!
ಇನ್ನೂ ವಿಶೇಷ ಅಂದ್ರೆ ಈ ಕೋರೆಯಲ್ಲಿ 2017 ರಲ್ಲಿ ಒಂದು ವರ್ಷದ ಅವಧಿಗೆ ಮಾತ್ರ ಗಣಿಗಾರಿಕೆ ಅವಕಾಶ ನೀಡಿದ್ದು ಬಳಿಕ ಈ ಸಮಸ್ಯೆಗಳ ಬಗ್ಗೆ ಪಂಚಾಯತ್ ನೀಡಿದ ದೂರಿನಂತೆ ಅನುಮತಿ ರದ್ದುಪಡಿಸಲಾಗಿತ್ತು. ಆದ್ರೆ ಕಳೆದ ಮೂರು ವರ್ಷಗಳಿಂದ ಕೋರೆ ಮುಖ್ಯಸ್ಥರು ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ ಆದ್ರೆ ನೀರುಮಾರ್ಗ ಗ್ರಾಮ ಪಂಚಾಯತ್ ಅಕ್ರಮ ಗಣಿಗಾರಿಕೆಗೆ ವಿರೋಧಿಸಿಯೇ ಇಲ್ಲ ಅದರಲ್ಲೂ ಸ್ವತಃ ಪಂಚಾಯತ್ ಅಧ್ಯಕ್ಷರ ಗ್ರಾಮದಲ್ಲೇ ಈ ರೀತಿಯ ಅಕ್ರಮ ಗಣಿಗಾರಿಕೆಯ ಮೂಲಕ ಮನೆ ಹಾನಿಯಾಗಿರುವುದು ವಿಪರ್ಯಾಸ ಎನ್ನುತ್ತಾರೆ ಸ್ಥಳೀಯರು…
ಭೂ ಮತ್ತು ಗಣಿ ಇಲಾಖೆಗೆ ದೂರು ನೀಡಿದ ಸಂತ್ರಸ್ಥರು :
ಭಯದಿಂದಲೇ ದಿನ ಕಳೆಯುವ ಸಂತ್ರಸ್ಥರು ಪಂಚಾಯತ್ ಗೆ ಮನವಿ ಕೊಟ್ಟು ಬೇಸತ್ತು ಕೊನೆಯ ಅಸ್ತ್ರ ವಾಗಿ ಮಂಗಳೂರು ಭೂ ಮತ್ತು ಗಣಿ ಇಲಾಖೆಗೆ ಭೇಟಿ ನೀಡಿ ದಾಖಲೆಗಳ ಸಮೇತ ಅಹವಾಲು ಸಲ್ಲಿಸಿದ್ದಾರೆ.
ಸಂತ್ರಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾ ಭೂ ಗಣಿ ವಿಜ್ಞಾನಿ, ಮತ್ತು ಕಿರಿಯ ಅಭಿಯಂತರರು ಈ ಅಕ್ರಮ ಕಲ್ಲಿನ ಕೋರೆಗೆ ದಾಳಿ ಮಾಡಿ ಅಕ್ರಮ ಗಣಿಗಾರಿಕ ಪ್ರದೇಶದಲ್ಲಿನ ಸಲಕರಣೆ, ಯಂತ್ರ, ವಾಹನಗಳನ್ನುಮುಟ್ಟುಗೋಲು ಹಾಕಿದ್ದಾರೆ. ಜೊತೆಗೆ ಈ ಅಕ್ರಮದ ವಿರುದ್ಧ ಸೂಕ್ತ ಕ್ರಮದ ಭರವಸೆಯನ್ನು ಸ್ಥಳೀಯ ಸಂತ್ರಸ್ಥರಿಗೆ ನೀಡಿದ್ದಾರೆ ಅದೇನೆ ಇರಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿನಂತೆ ಗ್ರಾಮದ ಅಭಿವೃದ್ಧಿಗಾಗಿ ಜನರಿಂದ ಓಟು ಪಡೆದ ಪಂಚಾಯತ್ ಆಡಳಿತ ನೋಟು ಕೊಟ್ಟ ಅಕ್ರಮಕೋರರ ಬೆನ್ನಿಗೆ ನಿಂತಿರುವುದು ವಿಪರ್ಯಸವೇ ಸರಿ..