LATEST NEWS
ಹಾಲಿನ ವ್ಯಾನ್ ಮತ್ತು ಸ್ಕೂಟರ್ ನಡುವೆ ಅಪಘಾತ – ಸವಾರ ಮೃತ್ಯು

ಉಡುಪಿ ನವೆಂಬರ್ 11: ಸ್ಕೂಟರ್ ಹಾಗೂ ಹಾಲಿನ ವಾಹನ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹಿರಿಯಡಕ ಗುಡ್ಡೆಯಂಗಡಿಯ ಅಂಗನವಾಡಿ ಬಳಿ ನಡೆದಿದೆ.
ಮೃತ ಸವಾರನನ್ನು ಬೈಲೂರು ಚಿಕ್ಕಲ್ ಬೆಟ್ಟು ನಿವಾಸಿ ವಿಘ್ನೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ವಿಘ್ನೇಶ್ ಮಣಿಪಾಲದ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ಬಜಗೋಳಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಹಾಲಿನ ವಾಹನಕ್ಕೆ ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿದೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ವಿಘ್ನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಸಂಪೂರ್ಣ ನಜ್ಜುನುಜ್ಜಾಗಿದೆ.
