Connect with us

    LATEST NEWS

    ಮೈಕ್ರೊ ವೀಕ್ಷಕರ ಹೊಣೆ ಮಹತ್ವದ್ದು- ರಾಜೀವ್ ರತನ್

    ಮೈಕ್ರೊ ವೀಕ್ಷಕರ ಹೊಣೆ ಮಹತ್ವದ್ದು- ರಾಜೀವ್ ರತನ್

    ಮಂಗಳೂರು ಏಪ್ರಿಲ್ 11 ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 640 ಸೂಕ್ಷ್ಮ , ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಇಲ್ಲಿ ಸಿಆರ್‍ಪಿಎಫ್ ವೆಬ್ ಕ್ಯಾಮರಾ ಮತ್ತು ಮೈಕ್ರೋ ಒಬ್ಸರ್ವರ್‍ ಗಳ ಪಾತ್ರ ಬಹುಮುಖ್ಯವಾಗಿರುತ್ತದೆ.

    ಎಲ್ಲಾ ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರ ಮೇಲ್ವಿಚಾರಣೆಯಲ್ಲಿ ಮತದಾನ ನಡೆಯಲಿದ್ದು 350 ಮೈಕ್ರೋ ವೀಕ್ಷಕರುಗಳಿಗೆ ಇಂದು ಪುರಭವನದಲ್ಲಿ ತರಬೇತಿಯನ್ನು ನೀಡಲಾಯಿತು.

    ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪಗಳು ಸಂಭವಿಸದಂತೆ ನೋಡಿಕೊಳ್ಳುವ ಬಹುಮುಖ್ಯ ಹೊಣೆಗಾರಿಕೆ ಮೈಕ್ರೋ ವೀಕ್ಷಕರದು ಎಂದು ಚುನಾವಣಾ ವೀಕ್ಷಕರಾದ ರಾಜೀವ ರತನ್ ಹೇಳಿದರು.
    ಇವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬಂದಿಗಳ ಕಾರ್ಯ ವಿಧಾನ, ಇವಿಎಂ, ವಿವಿ ಪ್ಯಾಟ್ ಸೇರಿದಂತೆ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂದು ತರಬೇತಿಯನ್ನುದ್ದೇಶಿಸಿ ಹೇಳಿದರು.

    ಮತಗಟ್ಟೆಯ ಬಳಿ ಅಹಿತಕರ ಘಟನೆಗಳು ನಡೆದರೆ, ಮತಯಂತ್ರಗಳಲ್ಲಿ ದೋಷ ಕಂಡುಬಂದರ ಕೈಗೊಳ್ಳಬೇಕಾದ ಕ್ರಮ, ಆಯೋಗ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು.

    ಮತದಾನ ನಡೆಯುವ ಹಿಂದಿನ ದಿನವೇ ಇತರೆ ಸಿಬ್ಬಂದಿ ಜತೆ ಮತಗಟ್ಟೆಯಲ್ಲಿರಬೇಕು. ಮತದಾನದ ದಿನ ಬೆಳಿಗ್ಗೆ 6 ರಿಂದ ನಡೆಸುವ ಮಾಕ್‍ಪೋಲ್ ಪರಿಶೀಲಿಸಿ, ಖಚಿತಪಡಿಸಿಕೊಂಡು ಅಳಿಸಿ ಹಾಕಬೇಕು. ಮತಗಟ್ಟೆಯೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅನುಮತಿ ನೀಡಬಾರದು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯು ಪೋಲಿಂಗ್ ಏಜೆಂಟರಿಗೆ ಅನುಮತಿ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಅವರು ಏನಾದರೂ ತೊಂದರೆಯಾದರೆ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಸೂಚನೆಯನ್ನು ನೀಡಿದರು.

    ಮತದಾನದ ದಿನ ಮತದಾನದ ಪ್ರಮಾಣ, ಮತಯಂತ್ರದಲ್ಲಿನ ದೋಷಗಳು ಕಂಡುಬಂದರೆ ಮತಗಟ್ಟೆಗೆ ಭೇಟಿನೀಡಿದ ಸೆಕ್ಟರ್ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿವರ, ಅನಧಿಕೃತ ವ್ಯಕ್ತಿಗಳು ಮತಗಟ್ಟೆ ಪ್ರವೇಶಿಸಿದ ವಿವರ, ಮತದಾನಕ್ಕೆ ಯಾವುದೇ ಅಡಚಣೆಯಾದರೆ ಮಾಹಿತಿ ನೀಡುವಂತೆ ಸೂಚಿಸಿದರು. ಮೈಕ್ರೋ ವೀಕ್ಷಕರಿಗೆ ಇವಿಎಂ, ವಿವಿ ಪ್ಯಾಟ್‍ಗಳ ಕುರಿತು ಡಾ. ಜಾನ್ ಪಿಂಟೋ ಪ್ರಾತ್ಯಕ್ಷಿಕೆ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply