BELTHANGADI
ಬೆಳ್ತಂಗಡಿ – ನಿಗೂಢವಾಗಿ ಸಾವನಪ್ಪಿದ ಲೈನ್ ಮ್ಯಾನ್

ಬೆಳ್ತಂಗಡಿ ಮಾರ್ಚ್ 27: ಮೆಸ್ಕಾಂ ನ ಲೈನ್ ಮ್ಯಾನ್ ಒಬ್ಬರು ನಿಗೂಢವಾಗಿ ಸಾವನಪ್ಪಿರುವ ಘಟನೆ ಅಂಡಿಜೆ ರಸ್ತೆ ಸಮೀಪ ನಡೆದಿದೆ. ಮೃತರನ್ನು ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವೇಣೂರು ಶಾಖೆಯ ಲೈನ್‌ಮ್ಯಾನ್ ಆಗಿರುವ ನಾರಾವಿ ತುಂಬೆಗುಡ್ಡೆ ನಿವಾಸಿ ಸುಧಾಕರ ಯಾನೆ ಕಿಟ್ಟ (50) ಎಂದು ಗುರುತಿಸಲಾಗಿದೆ.
ಕರ್ತವ್ಯದಲ್ಲಿದಲ್ಲಿದ್ದ ಸುಧಾಕರ ಅವರು ಅಂಡಿಜೆ ರಸ್ತೆ ಸಮೀಪದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿಯ ನೀರು ಹರಿಯುವ ಚರಂಡಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಸುಧಾಕರ ಅವರನ್ನು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಸುಧಾಕರ ಅವರು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದರು. ಸುಧಾಕರ ಅವರ ದೇಹದ ಮೇಲೆ ಯಾವುದೇ ಗಾಯದ ಕುರುಹುಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಸುಧಾಕರ ಅವರ ಸಾವಿನ ನಿಖರ ಕಾರಣ ತಿಳಿದು ಬರಬೇಕಿದೆ.

ಸುಧಾಕರ ಅವರು ಅವಿವಾಹಿತರಾಗಿದ್ದು ತಾಯಿ, ಓರ್ವ ಸಹೋದರ, ಓರ್ವ ಸಹೋದರಿಯನ್ನು ಅಗಲಿದ್ದಾರೆ.