LATEST NEWS
ಫ್ರೀ ಕರೆಂಟ್ ಸುದ್ದಿ ನಡುವೆ ಮಂಗಳೂರಿನಲ್ಲಿ ಮನೆಗೆ ಬಂತು 7.71 ಲಕ್ಷ ಕರೆಂಟ್ ಬಿಲ್…!!

ಮಂಗಳೂರು ಜೂನ್ 15: ರಾಜ್ಯದಲ್ಲಿ ಪ್ರೀ ಕರೆಂಟ್ ಬಗ್ಗೆ ಸುದ್ದಿಯಿದ್ದರೆ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಮೆಸ್ಕಾಂ ಬರೋಬ್ಬರಿ 7 ಲಕ್ಷದ ಕರೆಂಟ್ ಬಿಲ್ ನೀಡಿದೆ.
ಮಂಗಳೂರಿನ ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರ ಮನೆಗೆ 7.71 ಲಕ್ಷ ರೂಪಾಯಿ ಮೊತ್ತದ ವಿದ್ಯುತ್ ಬಿಲ್ ನೀಡಲಾಗಿತ್ತು. ಸದಾಶಿವ ಆಚಾರ್ಯ ಅವರ ಮನೆಗೆ ಪ್ರತಿ ತಿಂಗಳು ಮೂರು ಸಾವಿರ ಬಿಲ್ಲ ಬರುತ್ತಿತ್ತು. ಆದರೆ ಈ ಬಾರಿ ಮಾತ್ರ ಲಕ್ಷಗಟ್ಟಲೇ ಬಿಲ್ ಬಂದಿದೆ. ಈ ಹಿನ್ನಲೆ ಈಗ ಇಷ್ಟೊಂದು ಬಿಲ್ಲು ಬರಲು ಹೇಗೆ ಸಾಧ್ಯ ಎಂದು ಮೀಟರ್ ರೀಡರ್ ಅವರನ್ನು ಪ್ರಶ್ನಿಸಿದ್ದಾರೆ ಆದರೆ ರೀಡರ್ ನನಗೆ ಗೊತ್ತಿಲ್ಲ. ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ಎಂದು ಅವರು ಹೇಳಿ ಹೋದರು’ ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ತಿಳಿಸಿದರು.

ಮೀಟರ್ ರೀಡರ್ ಮಾಡಿದ ತಪ್ಪು ಗಮನಕ್ಕೆ ಬರುತ್ತಿದ್ದಂತೆಯೇ ಮೆಸ್ಕಾಂ ಅಧಿಕಾರಿಗಳು ತಪ್ಪನ್ನು ಸರಿಪಡಿಸಿ, 2,833 ಮೊತ್ತದ ಪರಿಷ್ಕೃತ ಬಿಲ್ಲು ನೀಡಿದ್ದಾರೆ.