Connect with us

KARNATAKA

ಚಿಕ್ಕಮಗಳೂರು ಬೈಪಾಸ್ ಮತ್ತು ಬೇಲೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ – ಸಂಸದ ಕೋಟ ನೇತೃತ್ವದಲ್ಲಿ ಸಭೆ

ಚಿಕ್ಕಮಗಳೂರು :   ಚಿಕ್ಕಮಗಳೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಳ ಕುರಿತು ಇಂದು ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಚಿಕ್ಕಮಗಳೂರು ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸುವುದು ಮತ್ತು ಚಿಕ್ಕಮಗಳೂರಿನಿಂದ ಬೇಲೂರುವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲು ಪ್ರಾತ್ಯಕ್ಷಿತೆಯನ್ನು ಕಾರ್ಯಕ್ರಮ ನಡೆಸಲಾಯಿತು.

ಸುಧೀರ್ಘ ದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಈ ಯೋಜನಾ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ನಿರ್ಧರಿಸಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಾತ್ಯಕ್ಷಿತೆಯನ್ನು ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡ ಸಾಧ್ಯವಾದಷ್ಟು ಬೇಗ ಈ ಕಾಮಗಾರಿಯನ್ನು ಆರಂಭಿಸಿ ಮುಗಿಸುವ ಬಗ್ಗೆ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮಾಜಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿಟಿ ರವಿಯವರು ಪಾಲ್ಗೊಂಡು ಸಮಗ್ರ ಮಾಹಿತಿಯನ್ನು ಒದಗಿಸಿ ಆದಷ್ಟು ಬೇಗ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು ಮತ್ತು ಉಳಿದ ಕಾಮಗಾರಿಗಳನ್ನು ಮುಗಿಸಬೇಕೆಂಬ ಸಲಹೆ ಸೂಚನೆಗಳನ್ನು ನೀಡಿದರು.

ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು ಬೈಪಾಸಿನ 20 ಕಿಮೀ ರಸ್ತೆಗೆ ಈಗಾಗಲೇ 600 ಕೋಟಿ ರೂಪಾಯಿ ಬಿಡುಗಡೆಗಾಗಿದ್ದು ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಮತ್ತು ಚಿಕ್ಕಮಗಳೂರಿನಿಂದ ಬೇಲೂರಿನ 24 ಕಿಮೀ ರಸ್ತೆಯನ್ನು ಚತುಷ್ಪಥಗೊಳಿಸಬೇಕೆಂಬ ಬಹುಕಾಲದ ಬೇಡಿಕೆ ಶೀಘ್ರ ಈಡೇರುವ ವಿಶ್ವಾಸವನ್ನು ಸಂಸದರು ನೀಡಿದರು. ಸಭೆಯಲ್ಲಿ ಎಇಇ ಕಾಂಬಲೆ, ಇಇ ಜಯಣ್ಣ, ಎಇ ಶಶಿಕುಮಾರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *