FILM
ವಿಶ್ವ ಸಂಗೀತ ಲೋಕದಲ್ಲಿ ಟ್ರೆಂಡ್ ಸೆಟ್ ಮಾಡಿದ ಕೇರಳದ ಯುವಕನ ಹಾಡು – ಯಾರೀದು Hanumankind – Big Dawgs
ಕೇರಳ ಸೆಪ್ಟೆಂಬರ್ 03: ಕೇರಳದ ಹುಡುಗನೊಬ್ಬನ ಹಾಡು ಇದೀಗ ಇಡೀ ವಿಶ್ವದಲ್ಲೇ ಪ್ರಸಿದ್ದಿಯಾಗಿದೆ. ಈ ಹುಡುಗ ಹಾಡಿರುವ ಹಿಪ್ ಹಾಪ್ ರಾಪ್ ಸಾಂಗ್ ವಿಶ್ವದ ಸಂಗೀತ ಲೋಕದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ್ದು, ನಮ್ಮ ದೇಶದ ಜನರಿಗೆ ತಿಳಿಯುವ ಮೊದಲೇ ಈತ ಇದೀಗ ವಿಶ್ವದಾದ್ಯಂತ ಟ್ರೆಂಡಿಂಗ್ ನಲ್ಲಿದ್ದಾನೆ.
ಹನುಮಾನ್‌ಕೈಂಡ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸೂರಜ್ ಚೆರುಕಟ್, ತನ್ನ ಹಿಟ್ ಟ್ರ್ಯಾಕ್ ಬಿಗ್ ಡಾಗ್ಸ್‌ನೊಂದಿಗೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ. ಈಗಾಗಲೇ ಯುಟ್ಯೂಬ್ ನಲ್ಲಿ 40 ಮಿಲಿಯನ್ ಗಿಂತಲೂ ಅಧಿಕ ವ್ಯೂವ್ಸ್ ನ್ನು ಹಾಡು ಪಡೆದುಕೊಂಡಿದೆ. ವಿಶೇಷವೆಂದರೆ ಭಾರತ ಬಿಟ್ಟು ವಿಶ್ವದೆಲ್ಲೆಡೆ ಈತ ಈಗ ಪ್ರಸಿದ್ದಿಯಲ್ಲಿದ್ದಾನೆ.
ಹನುಮಾನ್ ಕೈಂಡ್ ಎಂದು ಕರೆಯಲ್ಪಡುವ ಸೂರಜ್ ಚೆರುಕಾಟ್ ಅವರು ಕೇರಳದಲ್ಲಿ ಜನಿಸಿದರು. ಸೂರಜ್ ಅವರ ತಂದೆ ತೈಲ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರಣ ವಿದೇಶಗಳಲ್ಲಿ ಹೆಚ್ಚಾಗಿ ಬೆಳೆದಿದ್ದಾರೆ. ಅವರು ಫ್ರಾನ್ಸ್, ನೈಜೀರಿಯಾ, ಈಜಿಪ್ಟ್, ದುಬೈ ಮತ್ತು ಹೂಸ್ಟನ್, ಟೆಕ್ಸಾಸ್‌ನಲ್ಲಿ ವಾಸವಿದ್ದು, ಅಲ್ಲಿನ ಸಂಗೀತದ ಪ್ರಭಾವಕ್ಕೆ ಸೂರಜ್ ಒಳಗಾಗಿದ್ದರು.
ಸೂರಜ್ ಚೆರುಕಾಟ್ ಅವರ ಸಂಗೀತ ಜರ್ನಿ ಹೂಸ್ಟನ್ ನಿಂದ ಪ್ರಾರಂಭವಾಯಿತು. ಅಲ್ಲಿನ ಹಿಪ್ ಹಾಪ್ ಸಂಸ್ಕೃತಿಗೆ ಪ್ರೇರಿಪಿತರಾದ ಸೂರಜ್ ಅಲ್ಲಿನ ವಿಭಿನ್ನ ರೀತಿಯ ರಿಮಿಕ್ಸ್ ಶೈಲಿಯಿಂದ ಪ್ರಭಾವಿತರಾಗಿದ್ದರು. ಬಳಿಕ ಅಮೇರಿಕಾದಿಂದ ಮರಳಿ ಭಾರತಕ್ಕೆ ಬಂದ ಅವರು ಇಲ್ಲಿ ವಿಧ್ಯಾಬ್ಯಾಸ್ ವನ್ನು ಮುಂದುವರೆಸಿದರು. ಪದವಿ ಬಳಿಕ ಕೆಲವು ಖಾಸಗಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಿದ ಸೂರಜ್ ಗೆ ತಾನು ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ರಾಪ್ ಸಾಂಗ್ಸ್ ಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.
ಈಗ ಟ್ರೆಂಡಿಂಗ್ ನಲ್ಲಿರುವ ಹನುಮಾನ್ ಕೈಂಡ್ ಬಿಗ್ ಡಾಗ್ಸ್ ಹಾಡನ್ನು ಸ್ವತಃ ಸೂರಜ್ ಬರೆದಿದ್ದಾರೆ. ಸದ್ಯ ಈ ಹಾಡು ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ನ್ನು ಪಡೆದುಕೊಂಡಿದೆ. ಕೇರಳದ ಹುಡುಗನೊಬ್ಬ ಇದೀಗ ಇಡೀ ವಿಶ್ವದಲ್ಲಿ ಟ್ರೆಂಡಿಂಗ್ ನಲ್ಲಿದ್ದಾನೆ. ಸ್ಥಳೀಯವಾಗಿ ಜನರಿಗೆ ತಿಳಿಯುವ ಮೊದಲೇ ಈತ ಇಡೀ ವಿಶ್ವದಲ್ಲಿ ಸುದ್ದಿಯಲ್ಲಿದ್ದಾನೆ.