LATEST NEWS
ಪತಿ ಗಡ್ಡ ತೆಗೆಯದಿದ್ದಕ್ಕೆ ಗಂಡನ ತಮ್ಮನ ಜೊತೆಗೆ ಮಹಿಳೆ ಪರಾರಿ

ಮೀರತ್ ಮೇ 01: ಗಂಡ ಗಡ್ಡ ತೆಗೆದಿಲ್ಲ ಎಂದು ಮಹಿಳೆ ಗಂಡನ ತಮ್ಮನ ಜೊತೆ ಪರಾರಿಯಾದ ಘಟನೆ ಮೀರತ್ ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಜೊತೆ, ಏಳು ತಿಂಗಳ ಹಿಂದೆ ಅರ್ಷಿ ಎಂಬ ಯುವತಿಯ ವಿವಾಗವಾಗಿತ್ತು. ಮದುವೆಯಾದ ಕೂಡಲೇ ಕ್ಲೀನ್ ಶೇವ್ ಮಾಡುವಂತೆ ತನಗೆ ಪತ್ನಿಯಿಂದ ಒತ್ತಡ ಎದುರಾಗಿತ್ತು ಎಂದು ಶಕೀರ್ ಹೇಳಿದ್ದಾರೆ.
ಕುಟುಂಬದ ಒತ್ತಡದಿಂದ ತಾನು ಆತನನ್ನು ಮದುವೆಯಾಗಿದ್ದು, ಗಡ್ಡ ತೆಗೆಯಲು ಒಪ್ಪಿದರೆ ಮಾತ್ರ ಆತನೊಂದಿಗೆ ವಾಸಿಸುವುದಾಗಿ ಅರ್ಷಿ ಹೇಳಿದ್ದಾರೆ ಎನ್ನಲಾಗಿದೆ. ಇದೇ ವಿಷಯದ ಬಗ್ಗೆ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಶಕೀರ್ ತನ್ನ ಪತ್ನಿ ಗಡ್ಡ ತೆಗೆಯುವಂತೆ ಕಿರಿಕಿರಿ ಮಾಡುತ್ತಿದ್ದಾಳೆ ಎಂದು ಆಕೆಯ ಕುಟುಂಬಕ್ಕೂ ದೂರು ನೀಡಿದ್ದಾರೆ.

ಗಡ್ಡ ತೆಗೆಯುವಂತೆ ತನ್ನ ಗಂಡನಿಗೆ ಎಷ್ಟೇ ಹೇಳಿದರೂ ಆತ ಒಪ್ಪದ ಕಾರಣ ಕ್ಲೀನ್ ಶೇವ್ ಮಾಡುತ್ತಿದ್ದ ಗಂಡನ ತಮ್ಮನತ್ತ ಅರ್ಷಿ ಆಕರ್ಷಿತಳಾಗಿದ್ದು ಇಬ್ಬರೂ ಮನೆಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಗಂಡನ ಕಿರಿಯ ಸಹೋದರನ ಜೊತೆ ಮಹಿಳೆ ಅರ್ಷಿ ಓಡಿಹೋದ ಘಟನೆ ಶಕೀರ್ ಮತ್ತು ಅವನ ಕುಟುಂಬಕ್ಕೆ ಆಘಾತ ಉಂಟುಮಾಡಿದೆ. ಹೆಂಡತಿ ಮತ್ತು ಸಹೋದರ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ವಿಷಯದ ಬಗ್ಗೆ ಅರ್ಷಿಯ ಕುಟುಂಬಕ್ಕೆ ಕೂಡ ಮಾಹಿತಿ ನೀಡಿದ್ದಾನೆ. ಆದರೆ, ಆಕೆಯ ಕುಟುಂಬ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.