ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಮಠದ ಸಂಧಾನ ಸಭೆ ಮುಂದೂಡಿಕೆ

ಉಡುಪಿ ಜೂನ್ 11:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದ ನಡುವಿನ ಶಾಂತಿ ಸಂಧಾನ ಮಾತುಕತೆ ಪ್ರಗತಿಯಲ್ಲಿದ್ದು, ಜೂನ್ 10 ರಂದು ನಡೆಯಬೇಕಾಗಿದ್ದ ಮತ್ತೊಂದು ಸುತ್ತಿನ ಮಾತುಕತೆ ಮುಂದೂಡಿಕೆ ಆಗಿದೆ.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಮಠದ ಮಧ್ಯೆ ಇರುವ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಉಡುಪಿ ಪೇಜಾವರ ಶ್ರೀಗಳ ಮುಂದಾಳತ್ವದಲ್ಲಿ ನಡೆಯುತ್ತಿರುವ ಶಾಂತಿ ಸಂಧಾನ ಪ್ರಗತಿಯಲ್ಲಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಈ ಬಗ್ಗೆ ಶ್ರೀಗಳು ಪ್ರಕಟಣೆ ನೀಡಿದ್ದು ಶಾಂತಿ ಸಂಧಾನ ಪ್ರಕ್ರೀಯೆ ಪ್ರಯತ್ನ ಪ್ರಗತಿಯಲ್ಲಿದೆ. ಮಠ ಮತ್ತು ದೇವಸ್ಥಾನ ಎರಡೂ ಕಡೆಯ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇಬ್ಬರಿಗೂ ಸಮ್ಮತವಾಗಬಹುದಾದ ಸಂಧಾನ ಸೂತ್ರ ಸಿದ್ದ ಪಡಿಸಲಾಗಿದೆ.

ಇನ್ನೊಂದು ಸುತ್ತಿನ ಮಾತುಕತೆಯ ನಂತರ ಸಂಧಾನ ಕಾರ್ಯ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ. ದೇವಸ್ಥಾನ ಕಮಿಟಿ ಅಧ್ಯಕ್ಷರ ವೈಯ್ಯಕ್ತಿಕ ಅನಾನುಕೂಲತೆಯಿಂದ ಸೋಮವಾರದ ಸಭೆ ನಡೆದಿಲ್ಲ. ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಗಳಿವೆ ಅದನ್ನು ಮುಗಿಸಿ ಜೂನ್ 23 ರ ನಂತರ ಮಾತುಕತೆ ನಡೆಯಲಿದೆ ಎಂದು ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

6 Shares

Facebook Comments

comments