LATEST NEWS
ಮಂಗಳೂರು ಮಹಾನಗರಪಾಲಿಕೆ ಚುನಾವಣೆ ತಡವಾಗುವುದಕ್ಕೆ ಬಿಜೆಪಿಯೇ ಕಾರಣ

ಮಂಗಳೂರು ಮಹಾನಗರಪಾಲಿಕೆ ಚುನಾವಣೆ ತಡವಾಗುವುದಕ್ಕೆ ಬಿಜೆಪಿಯೇ ಕಾರಣ
ಮಂಗಳೂರು ಅಕ್ಟೋಬರ್ 26: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ತಡವಾಗುವುದಕ್ಕೆ ಬಿಜೆಪಿ ಪಕ್ಷದ ತಕರಾರುಗಳು ಕೋರ್ಟ್ ಗೆ ಹೊಗಿದ್ದೆ ಕಾರಣ ಎಂದು ಎಂಎಲ್ ಸಿ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈತ್ರಿ ಸರಕಾರದ ಮಿಸಲಾತಿಯನ್ನು ಪ್ರಶ್ನಿಸಿ ಕೋರ್ಟಗೆ ಹೋದ ಬಿಜೆಪಿಗೆ ಎಲ್ಲಾ ಕಡೆಗಳಿಂದ ಮುಖಭಂಗವಾಗಿದೆ ಎಂದರು.ಕೇಂದ್ರದಲ್ಲಿ ರಾಜ್ಯದಲ್ಲಿ ನಮ್ಮ ಭಾಗದ ಸಂಸದರೂ ಸಚಿವರು ಇದ್ದಾರೆ.ಅಡಿಕೆ ಬೆಳಗಾರರೂ ನಮ್ಮ ದೇಶದಲ್ಲಿ ಸಮಸ್ಯೆಯಲಿದ್ದಾರೆ. ಅವರಿಗೆ ಪರಿಹಾರ ಒದಗಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದರು.
