Connect with us

    LATEST NEWS

    ಮಂಗಳೂರು ಪಾಲಿಕೆ ನೀರಿನ ಬಿಲ್ ಸಮಸ್ಯೆ ಪರಿಹಾರಕ್ಕೆ ಮೇಯರ್ ಕ್ರಮ..!

    ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ನೀರಿನ ಬಿಲ್ಲಿನಲ್ಲಿ ಕಂಡು ಬಂದಂತಹ ಸಮಸ್ಯೆಗಳನ್ನು ಸರಿಪಡಿಸಲು ಹಲವಾರು ಬಾರಿ ಮಹಾನಗರಪಾಲಿಕೆ ಕಛೇರಿಗೆ ಬಂದು ಬಿಲ್ಲನ್ನು ಸರಿಪಡಿಸಲು ಸಾಧ್ಯವಾಗದೆ ಇರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಮೇಯರ್ ನಿರ್ಧರಿಸಿದ್ದಾರೆ.

     

    ಅರ್ಜಿದಾರರು ಪಾಲಿಕೆಗೆ ನೀಡಿದ ಅರ್ಜಿ ಪ್ರತಿಯನ್ನು ಮತ್ತು ಪಾಲಿಕೆಯ ನೀರಿನ ಬಿಲ್ಲನ್ನು ದಿನಾಂಕ: 03-01-2024 ರಂದು ಪೂರ್ವಹ್ನ 11.00 ಗಂಟೆಯಿಂದ ಸಂಜೆ 5.30 ಗಂಟೆವರೆಗೆ ಮಹಾನಗರಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಮಾನ್ಯ ಮೇಯರ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ನೀರಿನ ಬಿಲ್ಲು ಸಮಸ್ಯೆಯ ಸರಿಪಡಿಸುವಿಕೆ ಕಾರ್ಯವನ್ನು ಅಹವಾಲುಗಳನ್ನು ಸಲ್ಲಿಸಿ ತಕ್ಷಣದಲ್ಲೇ ನೀರಿನ ಬಿಲ್ಲಿನಲ್ಲಿ ಕಂಡು ಬಂದ ದೋಷವನ್ನು ಸರಿಪಡಿಸಿ ಯಾ ಬಿಲ್ಲನ್ನು ಪರಿಷ್ಕರಿಸಿ ನೀಡಲಾಗುವುದೆಂದು ಮೇಯರ್ ರವರ ಪ್ರಕಟಣೆ ತಿಳಿಸಿದೆ. ಅರ್ಜಿದಾರರು ಈ ಪರಿಷ್ಕರಿಸಿದ ನೀರಿನ ಬಿಲ್ಲನ್ನು 15 ದಿನಗಳೊಳಗಾಗಿ ಪಾವತಿಸಲು ಅನುವು ಮಾಡಿ ಕೊಡಲಾಗುವುದು ಎಂದು ಪಾಲಿಕೆ ಪ್ರಕಟನೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply