LATEST NEWS
ಮಂಗಳೂರು ಜನರಿಗೆ ಶುಭ ಸುದ್ದಿ ನೀಡಿದ ಮೇಯರ್ ‘ ನಗರದಲ್ಲಿ ನೀರಿನ ರೇಶನಿಂಗ್ ಸದ್ಯಕ್ಕಿಲ್ಲ’..!
ಮಂಗಳೂರು : ರಾಜ್ಯಾದ್ಯಾಂತ ಕುಡಿಯುವ ನೀರಿನ ಕೊರತೆ ಉಂಟಾಗಿ ಜಲ ಕ್ಷಾಮದ ಭೀತಿ ಎದುರಾಗಿದೆ ಆದ್ರೆ ಮಂಗಳೂರು ಮಹಾ ನಗರದ ಜನ ಇದರಿಂದ ಕೊಂಚ ನಿರಾಳರಾಗಿದ್ದಾರೆ.
ಕಾರಣ ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ಲಭ್ಯವಿದೆ. ಡ್ಯಾಂ ನಲ್ಲಿ 6 ಮೀ. ನೀರು ಈಗಲೂ ಇದೆ. ಪ್ರಮುಖ ನೀರಿನ ಮೂಲವಾದ ನೇತ್ರಾವತಿ ನದಿಯಲ್ಲಿ ಈಗಲೂ ಒಳಹರಿವೂ ಇದೆ. ನೀರು ಸಾಕಷ್ಟು ಇರುವುದರಿಂದ ನೀರಿನ ರೇಶನಿಂಗ್ ಸದ್ಯಕ್ಕೆ ಮಾಡುತ್ತಿಲ್ಲ ಎಂದು ಮೇಯರ್ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ಸಮಯದಲ್ಲಿ 5.9 ಮೀ. ನೀರಿನ ಸಂಗ್ರಹವಿತ್ತು. ಈ ಬಾರಿ 6 ಮೀ.ಗಿಂತ ಒಂದು ಇಂಚೂ ಕಮ್ಮಿಯಾಗಿಲ್ಲ. ಹಾಗೊಂದು ವೇಳೆ ಕಡಿಮೆಯಾದರೆ ಹರೇಕಳ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ನೀರಿನ ಮಟ್ಟ ಕಡಿಮೆಯಾದರೆ ತುಂಬೆ ಡ್ಯಾಂ ಕೆಳಗಿನ ನೀರನ್ನು ಪಂಪ್ ಮಾಡಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಎಎಂಆರ್ ಡ್ಯಾಂನಲ್ಲೂ ಸಾಕಷ್ಟು ನೀರು ಇರುವುದರಿಂದ ಕೈಗಾರಿಕೆಗಳಿಗೆ ಈ ಹಿಂದಿನಂತೆ ನೀರು ನೀಡಲಾಗುತ್ತಿದೆ. ಕೈಗಾರಿಕೆಗಳಿಗೂ ರೇಶನಿಂಗ್ ಮಾಡುವ ಅಗತ್ಯ ಕಾಣುತ್ತಿಲ್ಲ ಎಂದು ಮಂಗಳೂರು ಮೇಯರ್ ಸುಧೀರ್ ಶೆ್ಟ್ಟಿ ಸ್ಪಷ್ಟಪಡಿಸಿದ್ದಾರೆ.