LATEST NEWS
ಮಯಾಂತಿ ಲ್ಯಾಂಗರ್ ಐಪಿಎಲ್ ಟೂರ್ನಿಯಿಂದ ಹೊರ ನಡೆಯಲು ಕಾರಣ….!!

ಬೆಂಗಳೂರು: ದುಬೈನಲ್ಲಿ ಇಂದಿನಿಂದ ನಡೆಯಲಿರುವ ಐಪಿಎಲ್ ಕ್ರಿಕೆಟ್ ಟೂರ್ನಿಯ ನಿರೂಪಕರ ಲಿಸ್ಟ್ ನಲ್ಲಿ ಖ್ಯಾತ ಸ್ಪೋರ್ಟ್ಸ್ ನಿರೂಪಕಿ ಮಯಾಂತಿ ಲ್ಯಾಂಗರ್ ಹೆಸರು ಇಲ್ಲದೆ ಇರುವುದಕ್ಕೆ ಮಯಾಂತಿ ಲ್ಯಾಂಗರ್ ಸ್ಪಷ್ಟನೆ ನೀಡಿದ್ದು,ಇದರ ಜೊತೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಹಾಗೂ ಸ್ಟಾರ್ ಸ್ಪೋಟ್ಸ್ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್ ದಂಪತಿಗೆ ಗಂಡು ಮಗು ಜನನವಾಗಿದೆ. ಮಗು ಹುಟ್ಟಿ ಇಲ್ಲಿಗೆ ಒಂದುವರೆ ತಿಂಗಳಾದ ಬಳಿಕ ಮಯಾಂತಿ ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದಾರೆ.
ಇನ್ನು ಇಂದಿನಿಂದ ದುಬೈನಲ್ಲಿ ಐಪಿಎಲ್ ಆರಂಭವಾಗಲಿದ್ದು, ನಿರೂಪಕರ ಲಿಸ್ಟ್ ನಲ್ಲಿ ಮಯಾತಿ ಹೆಸರು ಇಲ್ಲದೆ ಇರುವುದರಿಂದ ಅಭಿಮಾನಿಗಳಲ್ಲಿ ಗೊಂದ ಉಂಟಾಗಿತ್ತು. ಕ್ರೀಡಾ ನಿರೂಪಕಿಯಾಗಿರುವ ಮಯಾಂತಿ ಟಿವಿಯಲ್ಲಿ ಕಾಣಿಸದ ಕಾರಣ, ವಿಚಾರಿಸಿದಾಗ ವಿಷಯ ಬಹಿರಂಗವಾಗಿದೆ. ಬಿನ್ನಿ ಹಾಗೂ ಮಯಾಂತಿ ಮಗುವನ್ನು ಎತ್ತಿಕೊಂಡಿರುವ ಫೋಟೋ ಜೊತೆಗೆ ಐಪಿಎಲ್‌ನ್ನು ವೀಕ್ಷಿಸಲಿದ್ದೇನೆ.

ಇನ್ನೂ ಕನ್ನಡತಿ ಮಯಾಂತಿ ಲ್ಯಾಂಗರ್ ಸ್ಥಾನವನ್ನ ಆಸ್ಟ್ರೇಲಿಯಾದ ಜನಪ್ರಿಯ ನಿರೂಪಕಿ ನರೋಲಿ ಮೆಂಡೋಸ್ ತುಂಬಲಿದ್ದಾರೆ. ಬಿಗ್ಬ್ಯಾಷ್ ಲೀಗ್, ಆಸ್ಟ್ರೇಲಿಯಾ ಓಪನ್ಸ್, ಬಾಸ್ಕೆಟ್ ಬಾಲ್ ಸೇರಿದಂತೆ ಹಲವು ಜನಪ್ರಿಯ ಸ್ಫೋರ್ಟ್ಸ್ ಟೂರ್ನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ನಿರೋಲಿ, ಎರಡುವರೆ ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಲಿದ್ದಾರೆ.
ಇವರ ಜೊತೆಗೆ ಸುರೇನ್ ಸುಂದರಂ, ಕಿರಾ ನಾರಾಯಣನ್, ನಸ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ದೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ಐಪಿಎಲ್ನ ನಿರೂಪಣೆ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ.