DAKSHINA KANNADA
ದಕ್ಷಿಣ ಕನ್ನಡದಲ್ಲಿ ಮಾಸ್ಟರಿಂಗ್ ಕಾರ್ಯ ಸಂಪೂರ್ಣ, ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ ಅಧಿಕಾರಿ ಸಿಬಂದಿ..!
ಮಂಗಳೂರು : ದಕ್ಷಿಣ ಕನ್ನಡ ಮಾಸ್ಟರಿಂಗ್ ಕಾರ್ಯ ಸಂಪೂರ್ಣಗೊಂಡಿದ್ದು 1876 ಮತಗಟ್ಟೆ ಗಳಿಗೆ ಮತಯಂತ್ರಗಳೊಂದಿಗೆ ಅಧಿಕಾರಿ ಸಿಬ್ಬಂದಿಗಳು ತೆರಳಿದರು.
ಜಿಲ್ಲೆಯ 8 ಕಡೆಗಳಲ್ಲಿ ಮಾಸ್ಟರಿಂಗ್ ಕಾರ್ಯ ನಡೆಯಿತು. ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ನೇತೃತ್ವದಲ್ಲಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿತ್ತು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,18,127 ಮತದಾರರಿದ್ದು ಇವರಿಗೆ ಒಟ್ಟು 1876 ಮತಗಟ್ಟೆ ಗಳ ವ್ಯವಸ್ಥೆ ಮಾಡಲಾಗಿದೆ.
ಇದರಲ್ಲಿ171 ಅತೀ ಸೂಕ್ಷ್ಮ ಮತಗಟ್ಟೆಗಳಾಗಿದ್ದು 1705 ಸಾಮಾನ್ಯ ಮತಗಟ್ಟೆ ಗಳಾಗಿದೆ. ಮತಗಟ್ಟೆಗಳಿಗೆ 11,255 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದರೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 1600 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಮತಗಟ್ಟೆಗಳಿಗೆ ತೆರಳಿರುವ ಸಿಬ್ಬಂದಿಯೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಮುಲ್ಲೈ ಮುಗಿಲನ್ ಮಾತುಕತೆ ನಡೆಸಿ ಯಾವುದೆ ಗೊಂದಲಗಳು ಇಲ್ಲದಂತೆ ಸಾಂಗವಾಗಿ ಚುನಾವಣಾ ಕಾರ್ಯ ನಡೆಸುವಂತೆ ಸಲಹೆ ನೀಡಿ ಶುಭ ಹಾರೈಸಿದರು.