LATEST NEWS
ಮೂರನೇ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ – ದಾಖಲೆ ಬರೆದ ಷೇರುಮಾರುಕಟ್ಟೆ

ಮುಂಬೈ ಮೇ 03 : ಲೋಕಸಭೆ ಚುನಾವಣೆ ಮತದಾನ ಮುಗಿದಿದ್ದು, ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದ್ದು. ಇದರ ಬೆನ್ನಲ್ಲೇ ಇಂದು ಷೇರು ಮಾರುಕಟ್ಟೆ ತನ್ನ ಸಾರ್ವಕಾಲಿಕ ದಾಖಲೆ ಬರೆದಿದೆ. ಆರಂಭಿಕ ವಹಿವಾಟಿನಲ್ಲೇ ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಏರಿಕೆ ದಾಖಲಿಸಿವೆ. 30 ಷೇರುಗಳ ಸೆನ್ಸೆಕ್ಸ್ ಮತ್ತು 50 ಷೇರುಗಳ ನಿಫ್ಟಿಯ ಎಲ್ಲ ಷೇರುಗಳು ಗಳಿಕೆ ಕಂಡಿವೆ.
ಬಿಎಸ್‌ಇ ಸೆನ್ಸೆಕ್ಸ್ 2,777.58 ಅಂಶಗಳಷ್ಟು ಅಥವಾ ಶೇಕಡ 3.75ರಷ್ಟು ಏರಿಕೆ ಕಂಡು, 76,738.89ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 808 ಅಂಶಗಳಷ್ಟು ಏರಿಕೆ ಕಂಡು ಸಾರ್ವಕಾಲಿಕ ದಾಖಲೆಯ 23,338.70 ರಲ್ಲಿ ವಹಿವಾಟು ಆರಂಭಿಸಿತು.
ಸೆನ್ಸೆಕ್ಸ್ ಷೇರುಗಳಾದ ಪವರ್ ಗ್ರಿಡ್, ಎನ್‌ಟಿಪಿಸಿ, ಲಾರ್ಸನ್ ಅಂಡ್ ಟೌಬ್ರೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹೆಚ್ಚು ಗಳಿಕೆ ದಾಖಲಿಸಿದ ಷೇರುಗಳಾಗಿವೆ.
