Connect with us

    DAKSHINA KANNADA

    ಪುತ್ತೂರು ಟೌನ್ ಕೋ ಅಪರೇಟೀವ್ ಬ್ಯಾಂಕ್ ನಲ್ಲಿ ಭಾರಿ ಅವ್ಯವಹಾರ, ಬ್ಯಾಂಕ್ ಸದಸ್ಯ ಸುದರ್ಶನ್ ಪುತ್ತೂರು ಗಂಭೀರ ಆರೋಪ

    ಪುತ್ತೂರು :  ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವ ಟೌನ್ ಕೋ ಅಪರೇಟೀವ್ ಬ್ಯಾಂಕ್  ನ ಕಾರ್ಯಚಟುವಟಿಕೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಬ್ಯಾಂಕ್ ನ ಸದಸ್ಯ ಮತ್ತು ಆರ್.ಟಿ.ಐ ಕಾರ್ಯಕರ್ತ ಸುದರ್ಶನ್ ಪುತ್ತೂರು ಆರೋಪಿಸಿದ್ದಾರೆ.

    ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಅವರು 100 ವರ್ಷಕ್ಕೂ ಹಳೆಯದಾದ ಈ ಟೌನ್ ಬ್ಯಾಂಕ್ 1 ಕೋಟಿಗೂ ಮಿಕ್ಕಿದ ವ್ಯವಹಾರವನ್ನು ಮಾಡುತ್ತಿದೆ. ಆದರೆ ಈವರೆಗೆ ಈ ಬ್ಯಾಂಕ್ ತನ್ನ ಶಾಲೆಯನ್ನು ವಿಸ್ತರಿಸಿಕೊಂಡಿಲ್ಲ. ಬ್ಯಾಂಕ್ ನ ಸಿಬ್ಬಂದಿಗಳ ಆಯ್ಕೆ ಮತ್ತು ಇತರ ಆಯ್ಕೆಗಳಿಗೆ ಕೇವಲ ಸಂಘಪರಿವಾರಕ್ಕೆ ಸಂಬಂಧಪಟ್ಟವರನ್ನೇ ನಿಯೋಜಿಸಿದ್ದಾರೆ ಎಂದು ಆರೋಪಿಸಿದ ಅವರು ಸದಸ್ಯರ ಗಮನಕ್ಕೆ ತರದೆ ಬ್ಯಾಂಕ್ ನ ವ್ಯವಸ್ಥಾಪಕ ಹುದ್ದೆಯನ್ನು ತೆಗೆದು ಹಾಕಿ, ಆಡಳಿತ ಮಂಡಳಿಗೆ ಬೇಕಾಗುವ ವ್ಯಕ್ತಿಗಳನ್ನು ಲಕ್ಷಾಂತರ ರೂಪಾಯಿ ಸಂಬಳ ನೀಡಿ ನಿಯೋಜಿಸಲಾಗಿದೆ.ಆದರೆ ಬ್ಯಾಂಕಿನ ಸದಸ್ಯರಿಗೆ ನೀಡುವ ಡಿವಿಡೆಂಟ್ ಹಣದಲ್ಲಿ ಏರಿಕೆಯನ್ನೇ ಮಾಡಿಲ್ಲ ಎಂದರು. ಬ್ಯಾಂಕ್ ವಿರುದ್ಧ ಈವರೆಗೆ 8 ದೂರುಗಳನ್ನು ನೀಡಿದ್ದು, ಈ ದೂರುಗಳ ವಿಚಾರಣೆ ಸೆಪ್ಟೆಂಬರ್ 29 ರಂದು ದಕ್ಷಿಣಕನ್ನಡ ಜಿಲ್ಲಾ ಸಹಕಾರಿ ನಿಬಂಧಕರ ಮೂಲಕ ನಡೆಯಲಿದೆ ಎಂದರು. ಬ್ಯಾಂಕ್ ನ ವ್ಯವಹಾರವನ್ನು ಪ್ರಶ್ನಿಸಿದರೆ ಗೂಂಡಾಗಳಿಂದ ಹಲ್ಲೆ ನಡೆಸಲಾಗುತ್ತದೆ ಎಂದು ಅವರು ಆರೋಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply