DAKSHINA KANNADA
ಮಸೀದಿ ಉದ್ಘಾಟನೆಗೆ ಶಾಲಾ ಮಕ್ಕಳು – ಮುಖ್ಯ ಶಿಕ್ಷಕನನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಶಿಕ್ಷಣ ಇಲಾಖೆ

ಪುತ್ತೂರು ಮಾರ್ಚ್ 24: ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಮಸೀದಿಗೆ ಕರೆದೊಯ್ದ ಶಾಲೆಯ ಮುಖ್ಯ ಶಿಕ್ಷಕನಿಗೆ ಕಡ್ಡಾಯ ರಜೆಯಲ್ಲಿ ಹೋಗುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ಮಾರ್ಚ್ 20 ರಂದು ಕೊಕ್ಕಡದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಸೀದಿಯೊಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ಕೊಕ್ಕಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿತ್ತು. ಈ ಸಂದರ್ಭ ಮಕ್ಕಳು ಮಸೀದಿಯೊಳಗೆ ಇದ್ದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಶಾಲೆಯ ಅಧ್ಯಾಪಕರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

ಆದರೆ ಕೊಕ್ಕಡ ಸರಕಾರಿ ಪ್ರೌಢಶಾಲೆಯ ವಿಧ್ಯಾರ್ಥಿಗಳನ್ನು ಇಲಾಖೆಯ ಅನುಮತಿಯಿಲ್ಲದೆ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ಮಸೀದಿಗೆ ಕರೆದೊಯ್ದಿದ್ದರು ಎಂದು ಹೇಳಲಾಗಿದೆ. ಈ ಹಿನ್ನಲೆ ಅವರನ್ನು ಕಡ್ಡಾಯ ರಜೆಗೆ ತೆರಳುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.