Connect with us

LATEST NEWS

ಸುಂದರವಾಗಿದ್ದಾಳೆ ಎಂದು ತಲೆಬೊಳಿಸಿ ಮನೆಯಲ್ಲೇ ಕೂಡಿ ಹಾಕಿದ್ದ – ಗಂಡನ ಕಿರುಕುಳಕ್ಕೆ ಒಂದು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಕೇರಳದ ಮಹಿಳೆ

ಕೇರಳ ಜುಲೈ 16 : ಹೆಂಡತಿ ಸುಂದವಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ತಲೆಬೋಳಿಸಿ ಆಕೆಗೆ ಮನೆಯಲ್ಲೆ ಕೂಡಿ ಹಾಕಿದ್ದ ಗಂಡ ಮತ್ತು ಆತನ ಮನೆಯವರ ಕಿರುಕುಳ ತಾಳಲಾರದೇ ಕೇರಳದ ಮಹಿಳೆಯೊಬ್ಬರು ಶಾರ್ಜಾದಲ್ಲಿ ತನ್ನ ಒಂದೂವರೆ ವರ್ಷದ ಮಗುವನ್ನು ಸಾಯಿಸಿ ಫೇಸ್ಟುಕ್ ನಲ್ಲಿ ಡೆತ್ ನೋಟ್ ಬರೆದು ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಾರ್ಜಾದಲ್ಲಿ ನಡೆದಿದ್ದು, ಈ ಬಗ್ಗೆ ಕೊಲ್ಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೃತರನ್ನು ಕೊಲ್ಲಂ ಮೂಲದ ಮಹಿಳೆ ವೈಪಂಜಿಕಾ ಮಣಿ ತನ್ನ ಒಂದೂವರೆ ವರ್ಷದ ಪುತ್ರಿ ವೈಭವಿ ಎಂದು ಗುರುತಿಸಲಾಗಿದೆ, ಜುಲೈ 8ರಂದು ಶಾರ್ಜಾದ ಅಅಲ್ ನಹಾದಾ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ ನೋಟ್ ಬರೆದು ತನ್ನ ಫೇಸ್ಟುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಇದರಂತೆ ಗಂಡ, ಮಾವ ಮತ್ತು ಗಂಡನ ಅಕ್ಕನ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ್ದಾಳೆ. ಇದನ್ನು ಆಧರಿಸಿ ಯುವತಿ ತಾಯಿ ಕೊಲ್ಲಂ ಪೊಲೀಸರಿಗೆ ದೂರು ನೀಡಿದ್ದಾರೆ. ವೈಪಂಜಿಕಾ ಅವರ ಪತಿ ನಿದೀಶ್, ಆತನ ಅಕ್ಕ ನೀತು ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.


ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಮಗಳು ಸಾವು ಕಂಡಿದ್ದಾಳೆಂದು ತಾಯಿ ದೂರು ನೀಡಿದ್ದಾರೆ. ವೈಪಂಜಿಕಾ ಮಣಿ ನೋಡಲು ಶ್ವೇತವರ್ಣದ ಸ್ಪುರದ್ರೂಪಿ ಹೆಣ್ಮಗಳಾಗಿದ್ದು, ಪತಿ ನಿದೀಶ್ ಮತ್ತು ಆತನ ಕುಟುಂಬಸ್ಥರು ನೋಡಲು ಕಪ್ಪಗಿದ್ದು, ಅಷ್ಟು ಆಕರ್ಷಕವಾಗಿರಲಿಲ್ಲ. ಈಕೆ ಸುಂದರವಾಗಿದ್ದಾಳೆಂದು ಇನ್ಯಾರ ಜೊತೆಗೋ ಸಂಬಂಧ ಇರಿಸಿದ್ದಾಳೆಂದು ಶಂಕಿಸಿ ಪತಿ ಕಿರುಕುಳ ನೀಡುತ್ತಿದ್ದ. ಅಲ್ಲದೆ, ನೀನು ಸುಂದರವಾಗಿ ಕಾಣಬಾರದು, ಕುರೂಪಿಯಾಗಿ ಇರಬೇಕು ಎಂದು ಹೇಳಿ ಆಕೆಯ ಕೂದಲನ್ನು ಪೂರ್ತಿಯಾಗಿ ಕತ್ತರಿಸಿ ಕೇಶ ಮುಂಡನ ಮಾಡಿಸಿದ್ದ. ಡೈವರ್ಸ್ ಕೊಟ್ಟು ಬಿಡು, ನಾನು ಹೋಗುತ್ತೇನೆ ಎಂದಿದ್ದಕ್ಕೆ ಆಕೆಯನ್ನು ಮನೆಯಲ್ಲಿ ಕೂಡಿಹಾಕಿ ಕೂದಲನ್ನು ಶೇವ್ ಮಾಡಿಸಿದ್ದ.

ಕೈಬರಹದಲ್ಲಿ ಡೆತ್ ನೋಟ್ ಬರೆಯಲಾಗಿದ್ದು, ಅದನ್ನು ಫೇಸ್ಟುಕ್ ನಲ್ಲಿ ಪೋಸ್ಟ್ ಮಾಡಿದ್ದಳು. ತನಗೆ ನೀಡುತ್ತಿದ್ದ ಕ್ರೂರ ಶಿಕ್ಷೆಯ ಬಗ್ಗೆ ಬರೆದುಕೊಂಡಿದ್ದು, ಮಾವ ತನ್ನ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೈಗೆ ಕೈಹಾಕಿದ್ದನ್ನು ಗಂಡನಲ್ಲಿ ಹೇಳಿದಾಗ, ನೀನು ನನಗೆ ಮಾತ್ರವಲ್ಲ, ನನ್ನ ಅಪ್ಪನಿಗೂ ಸಹಕಾರ ನೀಡಬೇಕು. ನಿನ್ನನ್ನು ನನ್ನ ಅಪ್ಪನಿಗಾಗಿ ಮದುವೆಯಾಗಿದ್ದೇನೆ ಎಂದು ಹೇಳಿದ್ದ. ಅಲ್ಲದೆ, ಮೊಬೈಲಿನಲ್ಲಿ ಕೆಲವು ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬೆಡ್ ನಲ್ಲಿ ನೀನೂ ಇದೇ ರೀತಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದ. ನನಗೆ ನಾಯಿ ತರ ಹೊಡೆಯುತ್ತಿದ್ದರು. ನನಗಿನ್ನು ಈ ಹಿಂಸೆಯನ್ನು ಸಹಿಸಲಾಗದು. ಆದರೆ ಇವರನ್ನು ಎಂದಿಗೂ ಹಾಗೇ ಬಿಡಬೇಡಿ. ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಡೆತ್ ನೋಟ್ ಬರೆದಿದ್ದಾಳೆ. ಪೊಲೀಸ್ ದೂರು ನೀಡಿರುವ ತಾಯಿ, ತನಗೇನೂ ಈ ರೀತಿಯ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಇಂತಹ ದುರುಳರಿಗೆ ಕಠಿಣ ಶಿಕ್ಷೆಯನ್ನೇ ನೀಡಬೇಕು ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *